ಮರ ಕಡಿದ ಕೈಗಳಲ್ಲೇ ಹಸಿರು ಸಂಕಲ್ಪ: 75 ಸಸಿಗಳ ನೆಡುವಿಕೆ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 12:ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಳಿಸುವ ಆಸ್ತಿ-ಪಾಸ್ತಿ ಹಾಗೂ ಸಂಪತ್ತಿಗಿಂತ ಒಂದು ಸಸಿಯನ್ನು ನೆಟ್ಟು, ಅದನ್ನು ಪೋಷಿಸಿ ಬೆಳೆಸುವುದರಿಂದ ದೊರೆಯುವ ಸಂತೋಷ ಮತ್ತು ತೃಪ್ತಿ ಹೆಚ್ಚು ಮಹತ್ವದ್ದಾಗಿದೆ. ಬೆಳೆದ ಮರಗಳನ್ನು ಕಡಿದಾಗ ಸಾರ್ವಜನಿಕರು ವ್ಯಕ್ತಪಡಿಸುವ ಆಕ್ರೋಶವು ಪರಿಸರ ಮತ್ತು ಹಸಿರೀಕರಣದ ಕುರಿತು ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದರು.ನಗರದ ಐಶ್ವರ್ಯ ನಗರದ ಉದ್ಯಾನವನದಲ್ಲಿ 75 ಸಸಿಗಳನ್ನು ನೆಡುವ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು…


