ರೇಬೀಸ್ ತಡೆಗೆ ಸಕಾಲಿಕ ಲಸಿಕೆಯೇ ರಕ್ಷಾಕವಚ
ಪ್ರಾಣಿಗಳ ಕಡಿತದ ಬಳಿಕ ನಿರ್ಲಕ್ಷ್ಯ ಬೇಡ: ಡಾ. ತೇಜಸ್ವಿನಿ ವಲ್ಲಭ ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 29:ರೇಬೀಸ್ ಶೇ.100ರಷ್ಟು ಮಾರಣಾಂತಿಕ ಕಾಯಿಲೆಯಾಗಿದ್ದರೂ, ಪ್ರಾಣಿಗಳ ಕಡಿತದ ಬಳಿಕ ಸಕಾಲದಲ್ಲಿ ಸೂಕ್ತ ಲಸಿಕೆ ಹಾಗೂ ಚಿಕಿತ್ಸೆ ಪಡೆಯುವುದರಿಂದ ರೋಗವನ್ನು ಶೇ.100ರಷ್ಟು ತಡೆಗಟ್ಟಬಹುದು ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯೆ ಹಾಗೂ ಡೀನ್ ಡಾ. ತೇಜಸ್ವಿನಿ ವಲ್ಲಭ ಹೇಳಿದರು.ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ವೈದ್ಯಕೀಯ ಮಹಾವಿದ್ಯಾಲಯದ ಸಾಮಾನ್ಯ ವೈದ್ಯಕೀಯ ಹಾಗೂ…


