‘ವಕ್ರತುಂಡ’ ಚಿತ್ರದ ಧಮಾಕಾ: ‘ಜೈ ಗಣೇಶ’ ಟೈಟಲ್ ಟ್ರ್ಯಾಕ್ಗೆ ಭರ್ಜರಿ ಸದ್ದು
ಸಪ್ತಸಾಗರ ವಾರ್ತೆ,ಬೆಂಗಳೂರು, ಸೆ. 15:ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿರುವ ಸಿನಿರಸಿಕರಿಗೆ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ವಕ್ರತುಂಡ’ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ. ಚಿತ್ರದ ಹೈ-ಎನರ್ಜಿ ಹಾಗೂ ಭಕ್ತಿಭಾವದ ವಿಡಿಯೋ ಟೈಟಲ್ ಟ್ರ್ಯಾಕ್ ‘ಜೈ ಗಣೇಶ’ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.ಲೋಚನ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಪ್ರತಿಭಾವಂತ ಸಂಗೀತ ನಿರ್ದೇಶಕ ಜೇಮ್ಸ್ ಆರ್ಕಿಟೆಕ್ಟ್ ಮಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಬ್ಬದ ಜೋಶ್ ಹೆಚ್ಚಿಸುವ ಸಾಹಿತ್ಯವನ್ನು ರಾಘವ ರಂಜನ್ ರಚಿಸಿದ್ದು, ಖ್ಯಾತ ಗಾಯಕ ಶಶಾಂಕ್…


