ಅಕ್ರಮ ಸಿಲಿಂಡರ್ ಅಡ್ಡೆ ಮೇಲೆ ದಾಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 27:ನಗರದ ಅತಾವುಲ್ಲಾ ಚೌಕ್ ಹತ್ತಿರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಗಳಿಂದ ಆಟೋಗಳಿಗೆ ರೀಪಿಲ್ ಮಾಡುತ್ತಿರುವ ಸ್ಥಳದ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಬುಧವಾರ ದಾಳಿ ಮಾಡಿ ಅಕ್ರಮ ಸಿಲಿಂಡರ್ ಗಳನ್ನು ವಶಪಡಿಸಿಕೊಂಡರು.1 ತುಂಬಿದ ಅಡುಗೆ ಅನಿಲ ಸಿಲಿಂಡರ್ ಹಾಗೂ 3 ಖಾಲಿ ಸಿಲಿಂಡರ್ ಗಳನ್ನು, ಮತ್ತು ರಿಪಿಲ್ ಮಾಡಲು ಬಳಸುತ್ತಿದ್ದ ಮೋಟಾರು ಮತ್ತು ತೂಕದ ಯಂತ್ರವನ್ನು ವಶಪಡಿಸಿಕೊಂಡು ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಕುಂಚಗನೂರ ಗ್ರಾಮದ ಬಳಿ ರೈತ ಮೊಸಳೆಗೆ ಹೇಗೆ ಬಲಿಯಾದ ಗೊತ್ತಾ?

ಸಪ್ತಸಾಗರ ವಾರ್ತೆ,ವಿಜಯಪುರ, ಆ. 23:ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ರೈತನೊಬ್ಬ ಕೃಷ್ಣಾ ನದಿಯಲ್ಲಿ ಮೊಸಳೆಗೆ ಬಲಿಯಾದ ಅವಘಡ ಶನಿವಾರ ಸಂಭವಿಸಿದೆ.ರೈತ ಮೊಸಳೆಗೆ ಹೇಗೆ ಬಲಿಯಾದ ಎಂಬ ಡಿಟೇಲ್ಸ್ ಇಲ್ಲಿದೆ ನೋಡಿ.ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿಎತ್ತುಗಳ ಮೈ ತೊಳೆಯಲು ಹೋಗಿದ್ದಖಾಸಪ್ಪ‌ ಕಂಬಳಿ (38) ಎಂಬುವನನ್ನು ಮೊಸಳೆ ಎಳೆದುಕೊಂಡು ಹೋಗಿದೆ.ರೈತ ಖಾಸಪ್ಪ ಎತ್ತುಗಳ ಮೈ ತೊಳೆಯುವಲ್ಲಿ ಮೈ ಮರೆತಿದ್ದ. ಇದೇ ವೇಳೆ ಹಸಿವಿನಿಂದ ಚಡಪಡಿಸುತ್ತಿದ್ದ ಮೊಸಳೆ ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಿತ್ತು. ತಡ…

Read More

8 ರೌಡಿಶೀಟರ್ ಗಡಿಪಾರು

ಸಪ್ತಸಾಗರ ವಾರ್ತೆ ವಿಜಯಪುರ, ಆ. 20:ಜಿಲ್ಲೆಯಲ್ಲಿ ಮುಂಬರುವ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಯ್ದುಕೊಂಡು ಬರುವ ಹಿನ್ನೆಲೆಯಲ್ಲಿ ಎಂಟು ಜನ ರೌಡಿಶೀಟರ್ ಗಳನ್ನು ವಿವಿಧ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಕೊಲೆ, ಕೊಲೆಗೆ ಯತ್ನ, ಆಯುಧ ಕಾಯ್ದೆ, ದೊಂಬಿ, ಹಲ್ಲೆ, ಕನ್ನಾ ಕಳವು ಮುಂತಾದ ಅಪರಾಧಿಕ ಪ್ರಕರಣಗಳಲ್ಲಿ ಈ ರೌಡಿ ಶೀಟರ್ ಗಳು ಭಾಗಿಯಾಗಿದ್ದರು.ಇನ್ನು 19 ಜನ ರೌಡಿ ಶೀಟರ್ ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲು…

Read More

ಮುಂಗಡ ಹಣ ಕೊಡದ್ದಕ್ಕೆ ಒಬ್ಬನನ್ನು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ : ಇಬ್ಬರ ಸೆರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 19:ಕೆಲಸಕ್ಕೆ ಬರುವುದಾಗಿ ಮುಂಗಡ ಹಣ ಪಡೆದಿದ್ದನ್ನು ವಾಪಸ್ ಕೊಡದೇ ಇರುವುದಕ್ಕೆ ಹಣ ಪಡೆದ ವ್ಯಕ್ತಿಯನ್ನು ಇಬ್ಬರು ಸರಪಳಿಯಿಂದ ಕಟ್ಟಿ ಹಾಕಿದ ಅಮಾನವೀಯ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.ಚಡಚಣದ ಕುಮಾರ ಉರ್ಪ್ ಅರ್ಜುನ ಬಿರಾದಾರ, ಉಮರಾಣಿ ಗ್ರಾಮದ ಶ್ರೀಶೈಲ ಗಿರಿಯಪ್ಪ ಪೀರಗೊಂಡ ಅವರು ಬಂಧಿತ ಆರೋಪಿಗಳು.ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದ ಬಾಶಾಸಾಬ ಅಲ್ಲಾವುದ್ದೀನ್ ಮುಲ್ಲಾ ಎಂಬಾತ ಡ್ರೈವಿಂಗ್ ಕೆಲಸಕ್ಕೆ ಬರುವುದಾಗಿ 20,000 ರೂ. ಮುಂಗಡವಾಗಿ ಪಡೆದುಕೊಂಡಿದ್ದರು. ಕೆಲಸಕ್ಕೂ…

Read More

ಸುಶೀಲ್ ಕಾಳೆ ಕೊಲೆ ಪ್ರಕರಣ: ಮತ್ತೆ ನಾಲ್ವರು ಆರೋಪಿತರ ಬಂಧನ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 16:ಸುಶೀಲ್ ಕಾಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ನಾಲ್ವರು ಆರೋಪಿತರನ್ನು ಬಂಧಿಸಲಾಗಿದೆ.ವಿಜಯಪುರದ ಭರತ್ ನಗರದ ಗೌತಮ ಹನಮಂತ ಆಲಮೇಲ್‌ಕರ (25),ದೇಗಿನಾಳ ಗ್ರಾಮದ ನಾರಾಯಣ ಗಣಪತಿ ಜಾಧವ (20), ಕೊಲ್ಹಾರ ತಾಲೂಕಿನ ಹನುಮಾಪುರ ಗ್ರಾಮದ ಬಸವರಾಜ ಮುನ್ನಾಳ( 20) ಹಾಗೂ ಬಾಗಲಕೋಟೆ ನವನಗರದ ಪ್ರಜ್ವಲ ಶರಣಪ್ಪ ಹಳಿಮನಿ (ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ) ಬಂಧಿತ ಆರೋಪಿತರು.ನಿನ್ನೆಯಷ್ಟೇ ಹಿಟ್ನಳ್ಳಿಯ ಹಾಲಿವಸ್ತಿ ಸಾಯಿ ಪಾರ್ಕ್ ನಿವಾಸಿ ವಿಠೋಬಾ ಕಲ್ಲವ್ವಗೋಳ (29), ಕೊಲ್ಹಾರ ತಾಲೂಕಿನ ನಾಗರದಿನ್ನಿ ಗ್ರಾಮದ…

Read More

ಕೊಲೆ ಆರೋಪಿಗಳಿಬ್ಬರ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 15:ನಿನ್ನೆಯಷ್ಟೇ ನಗರದಲ್ಲಿ ನಡೆದ ಸುಶೀಲ್ ಕಾಳೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಕಲ್ಲು, ಕಂಟ್ರಿ ಪಿಸ್ತೂಲ್ ನಿಂದ ಆರೋಪಿಗಳು ದಾಳಿ ನಡೆಸಿದಾಗ ಪೊಲೀಸರು ಪ್ರತಿಯಾಗಿ ಆರೋಪಿಗಳಿಬ್ಬರ ಮೇಲೆ ಗುಂಡು ಹಾರಿಸಿದ್ದು, ಅವರ ಕಾಲುಗಳಿಗೆ ಗಾಯಗಳಾದ ಘಟನೆ ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಇಟ್ಟಂಗಿಹಾಳ ರಸ್ತೆಯಲ್ಲಿ ನಡೆದಿದೆ.ಆಕಾಶ ಕಲ್ಲವ್ವಗೋಳ (24), ಸುಭಾಸ ಬಗಲಿ (20) ಗಾಯಗೊಂಡ ಆರೋಪಿಗಳು.ಇಬ್ಬರು ಆರೋಪಿಗಳಿಗೆ ಕಾಲಿಗೆ ಗುಂಡು ತಗಲಿದ್ದು, ಆರೋಪಿಗಳನ್ನು ಜಿಲ್ಲಾ…

Read More

ವಿಜಯಪುರದಲ್ಲಿ ಹಾಡ ಹಗಲೆ ಯುವಕನ ಬರ್ಬರ ಹತ್ಯೆ

ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 14:ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ನಗರದ ಎಸ್. ಎಸ್. ರಸ್ತೆಯ ಎಸ್. ಎಸ್. ಕಾಂಪ್ಲೆಕ್ಸ್ ನಲ್ಲಿ ಇರುವ ಅಮರ ವರ್ಷಿಣಿ ಸರಕಾರಿ ಬ್ಯಾಂಕಿನಲ್ಲಿ ನಡೆದಿದೆ.ಸುಶೀಲ್ ಕಾಳೆ (43) ಕೊಲೆಗೀಡಾದ ಯುವಕ.ಬ್ಯಾಂಕಿನಲ್ಲಿದ್ದ ಈ ಯುವಕನ ಮೇಲೆ ಮಾರಾಕಸ್ತ್ರಗಳಿಂದ ನಾಲ್ವರು ಹಲ್ಲೆ ಮಾಡಿದ್ದು ತೀವ್ರವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ನಗರದ ಬಿ ಎಲ್ ಡಿ ಇ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಂತಾಜನಕ ಸ್ಥಿತಿಯಲ್ಲಿದ್ದ…

Read More

ಯುವಕನ ಶವ ಪತ್ತೆ: ಕೊಲೆ ಶಂಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 11:ಕೊಲೆಯಾದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ತಾಲೂಕಿನ ಅರಕೇರಿ ಬಳಿ ಶುಕ್ರವಾರ ಪತ್ತೆಯಾಗಿದೆ.ಬಿಳಿನಸಿದ್ದ ದುಂಡಪ್ಪ ಒಡೆಯರ್ (33) ಶವವಾಗಿ ಪತ್ತೆಯಾಗಿರುವ ಯುವಕ.ಅರಿಕೇರಿ ಗ್ರಾಮದ ಕರಾಡ ದೊಡ್ಡಿಯ ರಸ್ತೆಯಲ್ಲಿ ಗುಪ್ತಾಂಗ, ಕತ್ತು ಹಾಗೂ ಇತರೆ ಭಾಗಗಳಿಗೆ ಗಾಯಗಳಾಗಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.ಅರಕೇರಿ ಗ್ರಾಮದ ನಿವಾಸಿ ಬಿಳನಸಿದ್ದಅಪರಿಚಿತರಿಂದ ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲಿ ಕೊಲೆಯಾದ ಯುವಕನ ಸಂಬಂಧಿಕರ ಆಕ್ರಂದ್ರನ ಮುಗಿಲು ಮುಟ್ಟಿತ್ತು. ಪೊಲೀಸರು ಮುಂದಿನ…

Read More

ಮನಗೂಳಿ ಕ್ಯಾನರಾ ಬ್ಯಾಂಕ್ ಕಳ್ಳತನ ಪ್ರಕರಣ: ಮತ್ತೆ 12 ಜನರ ಬಂಧನ, 39 ಕೆಜಿ ಬಂಗಾರ ಹಾಗೂ 1.16 ಕೋಟಿ ನಗದು ಜಫ್ತು

ಸಪ್ತಸಾಗರ ವಾರ್ತೆ ವಿಜಯಪುರ, ಜು. 11: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 12 ಜನರನ್ನು ಬಂಧಿಸಲಾಗಿದ್ದು, ಇದುವರೆಗೆ ಬಂದಿದ್ದರ ಸಂಖ್ಯೆ 15ಕ್ಕೇರಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನಕುಮಾರ ರಾಠೋಡ ತಿಳಿಸಿದ್ದಾರೆ.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಪೊಲೀಸರು 3 ಆರೋಪಿಗಳನ್ನು ಬಂಧಿಸಿದ್ದಾರೆ. ಅವರು ನೀಡಿದ ಮಾಹಿತಿಯನ್ನು ಆಧರಿಸಿಪ್ರಕರಣದ ಮತ್ತೆ 12 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.ಮೇ 25ರಂದು ಮನಗೂಳಿ ಕೆನರಾ…

Read More

ಕೊಯಿಮತ್ತೂರು ಬ್ಲಾಸ್ಟ್ ಪ್ರಕರಣ: ಓರ್ವ ಆರೋಪಿ ಬಂಧನ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 10:ತಮಿಳುನಾಡಿನ ಕೊಯಿಮತ್ತೂರಿನಲ್ಲಿ ನಡೆದ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರದಲ್ಲಿ ವಾಸವಾಗಿದ್ದ ಪ್ರಮುಖ ಆರೋಪಿಯನ್ನು ತಮಿಳುನಾಡಿನ ಕೊಯಿಮತ್ತೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಸಾದಿಕ್ ರಾಜಾ (50) ಬಂಧಿತ ಆರೋಪಿ.1998 ರಲ್ಲಿ ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಬ್ಲಾಸ್ಟ್ ಪ್ರಕರಣ ನಡೆದಿತ್ತು. ಇದಾದ ಬಳಿಕ ಪ್ರಮುಖ ಆರೋಪಿ ಸಾದಿಕ್ ರಾಜಾ ಕಳೆದ 27 ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ತಲೆ ಮರೆಸಿಕೊಂಡಿದ್ದ.ಕಳೆದ 12 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ವಿಜಯಪುರದಲ್ಲಿ ಜೀವನ ನಡೆಸುತ್ತಿದ್ದ…

Read More