ಮೌಲಾನಾ ಅಬ್ದುಲ್ ಕಲಾಂ ಅಜಾದ್ ಜಯಂತಿ
ಸಪ್ತಸಾಗರ ವಾರ್ತೆ, ವಿಜಯಪುರ, ನ. 11: ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರ ಜಯಂತಿಯ ಪ್ರಯುಕ್ತ ಹೊನ್ನುಟಗಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ರಾಷ್ಟ್ರದ ಪ್ರಥಮ ಶಿಕ್ಷಣ ಮಂತ್ರಿ ಹಾಗೂ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಜಾದ್ ಅವರ ಶಿಕ್ಷಣ ಸೇವೆ ಹಾಗೂ ರಾಷ್ಟ್ರ ನಿರ್ಮಾಣದ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ಪ್ರಾಂಶುಪಾಲ ದಿವಾಕರ್ ಮಾತನಾಡಿ, ಮೌಲಾನಾ ಅಜಾದ್ ಅವರ ಜೀವನ, ಅವರ ಶಿಕ್ಷಣದ ದೃಷ್ಟಿಕೋನ ಹಾಗೂ ಯುವ ಪೀಳಿಗೆಯು…


