
ಧಾರಾಕಾರ ಮಳೆ: ಮನೆ ಕುಸಿದು ಮೂವರಿಗೆ ಗಾಯ
ಸಪ್ತಸಾಗರ ವಾರ್ತೆ ವಿಜಯಪುರ, ಆ. 28:ಜಿಲ್ಲೆಯಲ್ಲಿ ಗುರುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಮನೆ ಕುಸಿದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.ಮಲ್ಲವ್ವ ರುದ್ರಪ್ಪ ಗುಂಡುಪಲ್ಲೆ, ರುದ್ರಪ್ಪ ತಮ್ಮಣ್ಣ ಗುಂಡುಪಲ್ಲೆ ಹಾಗೂ ಶಾರದಾ ರುದ್ರಪ್ಪ ಗುಂಡುಪಲ್ಲೆ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಿರೇಮುರಾಳ ಗ್ರಾಮದಲ್ಲಿ ಸುಮಾರು ರಾತ್ರಿ 12-30 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಜನರ ಮೇಲೆ ಮನೆ ಕುಸಿದಿದೆ. ಮೂವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.