ಕನ್ಹೇರಿ ಶ್ರೀಗಳ ಮೇಲಿನ ನಿಷೇಧ ಹಿಂಪಡೆಯದಿದ್ದರೆ ವಿಜಯಪುರ ಬಂದ್ ಗೆ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 16: ಸಮಾಜದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಯಥಾವತ್ತಾಗಿ ವಿವರಿಸಿದ್ದಕ್ಕೆ ಶ್ರೀ ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗಳಿಗೆ ವಿಜಯಪುರಕ್ಕೆ ಬರದಂತೆ ಜಿಲ್ಲಾಡಳಿತ ನಿಷೇಧ ಹೇರಿರುವುದನ್ನು ಹಿಂಪಡೆಯದಿದ್ದರೆ ವಿಜಯಪುರದ ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಎಚ್ಚರಿಸಿದ್ದಾರೆ.ರಾಜಕೀಯ ಪ್ರಾಬಲ್ಯ ಸಾಧಿಸಲು, ವೋಟ್ ಬ್ಯಾಂಕ್ ರಾಜಕಾರಣವನ್ನು ಧಿಕ್ಕರಿಸಲು ಅವರು ಮಾತನಾಡಿದ ಕಾರಣ, ಅವರ ಮೇಲೆ ಈ ಕ್ರಮ ಜರುಗಿಸಲಾಗಿದೆ. ಆತ್ಮನಿರ್ಭರ ಸಮಾಜವನ್ನು ಸ್ಥಾಪಿಸಲು ಅನೇಕ ಉಪಕ್ರಮಗಳನ್ನು…

Read More

ಕನ್ಹೇರಿ ಶ್ರೀಗಳಿಗೆ ಎರಡು ತಿಂಗಳ ಕಾಲ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಡಿಸಿ ಆದೇಶ

ಸಪ್ತಸಾಗರ ವಾರ್ತೆ ವಿಜಯಪುರ, ಅ. 16:ಮಹಾರಾಷ್ಟ್ರದ ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧಿಸಿಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಆದೇಶ ಹೊರಡಿಸಿದ್ದಾರೆ.ಇತ್ತೀಚೆಗೆ ಮಹಾರಾಷ್ಟ್ರದ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ಸಿಎಂ ಕೃಪಾಪೋಷಿತ ಲಿಂಗಾಯತ ಮಠಾಧೀಶರ ಒಕ್ಕೂಟ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದ ಹಿನ್ನೆಲೆ ಕನ್ಹೇರಿ ಶ್ರೀಗಳಿಗೆ ದಿನಾಂಕ 16-10-2025 ರಿಂದ 14-12- 2025 ವರೆಗೆ ಎರಡು ತಿಂಗಳ ಕಾಲ ಜಿಲ್ಲಾ ಪ್ರವೇಶ ನಿರ್ಬಂಧಿಸಿ ಆದೇಶ ಮಾಡಿದ್ದಾರೆ.ಅ. 16, 17 ರಂದು ಬಸವನ ಬಾಗೇವಾಡಿಯಲ್ಲಿ ನಡೆಯುವ…

Read More

ನಿಡಗುಂದಿ ತಾಲೂಕಾ ವಿವಿಧ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಭೇಟಿ, ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ ಅ.15: ಜಿಲ್ಲೆಯ ನಿಡಗುಂದಿ ತಾಲೂಕಿನ ತಹಶೀಲ್ದಾರ ಕಚೇರಿ, ನ್ಯಾಯಬೆಲೆ ಅಂಗಡಿ, ಅಂಗನವಾಡಿ-ಗ್ರಾಮ ಒನ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಿಡಗುಂದಿ ತಹಶೀಲ್ದಾರ ಕಚೇರಿ ಹಾಗೂ ಅಟಲ್ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ವಿವಿಧ ಕೆಲಸ ಕಾರ್ಯಗಳಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಅವರ ಕಾರ್ಯಗಳಿಗೆ ಸ್ಪಂದಿಸಬೇಕು. ಸಕಾಲ ಅರ್ಜಿಗಳನ್ನು ಕೂಡಲೇ ವಿಲೇ ಮಾಡಬೇಕು. ಯಾವುದೇ ಬಾಕಿ ಕಡತಗಳನ್ನು ಉಳಿಸಿಕೊಳ್ಳದೇ…

Read More

ನಾಳೆ ವಿಜಯಪುರ ಬಂದ್ ಗೆ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 15: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಆರೋಪಿ ಬಂಧನಕ್ಕೆ ಆಗ್ರಹಿಸಿ ನಾಳೆ (ಅ. 16ರಂದು) ವಿವಿಧ ಪ್ರಗತಿಪರ ಸಂಘಟನೆಗಳು ವಿಜಯಪುರ ಬಂದ್ ಗೆ ಕರೆ ನೀಡಿವೆ.ಅವಶ್ಯಕ ವಸ್ತುಗಳು, ಔಷಧ ಹಾಗೂ ಆರೋಗ್ಯ ಸೇರಿದಂತೆ ತುರ್ತು ಸೇವೆಗಳು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಹುತೇಕ ಸ್ತಬ್ಧವಾಗಲಿವೆ.ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯವಾದಿಯೊಬ್ಬರು ಶೂ ಎಸೆದಿರುವುದು ಅತ್ಯಂತ ಖಂಡನಾರ್ಹ. ಇದು ಪ್ರಜಾಪ್ರಭುತ್ವ ಮೇಲೆ ಹಾಗೂ…

Read More

ಉದ್ಯೋಗ ಮೇಳದಲ್ಲಿ 32 ಜನರ ಆಯ್ಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 15: ನಗರದ‌ ಬಿ.ಎಲ್.ಡಿ.ಇ ಸಂಸ್ಥೆಯ‌ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ ಕಾಲೇಜಿನಲ್ಲಿ ಅಕ್ಟೋಬರ್ 13 ಮತ್ತು 14‌ ರಂದು ದಕ್ಷಿಣ ಕೋರಿಯಾದ ಪ್ರತಿಷ್ಠಿತ ಸಿ.ಎನ್.ಸಿ‌ ಯಂತ್ರಗಳ ಉತ್ಪಾದಕ ಸಂಸ್ಥೆ ಡಿ. ಎನ್. ಸೊಲೂಶನ್ಸ್ ಆಯೋಜಿಸಿದ್ದ ಎರಡು ದಿನಗಳ ಉದ್ಯೋಗ ಮೇಳದಲ್ಲಿ 32 ಜನ ಆಯ್ಕೆಯಾಗಿದ್ದಾರೆ.ಬೆಂಗಳೂರಿನ‌ ಡಿ. ಎನ್. ಸೊಲೂಶನ್ಸ್ ಸಂಸ್ಥೆಯ ಉಪಾಧ್ಯಕ್ಷ ಸುರೇಶ ನಾರಾಯಣ ಮತ್ತು ಮಾನವ ಸಂಪನ್ಮೂಲ ಅಧಿಕಾರಿ ಸ್ಮೀತಾ ಆರ್. ಅವರು ಈ ಉದ್ಯೋಗ‌ ಮೇಳದಲ್ಲಿ‌ ನಡೆಸಿದ ಸಂದರ್ಶನದಲ್ಲಿ‌ ವಿಜಯಪುರ…

Read More

ರಂಗಕರ್ಮಿ ತಾಳಿಕೋಟೆ ನಿಧನಕ್ಕೆ ಸಚಿವ ಶಿವಾನಂದ ಪಾಟೀಲ ಕಂಬನಿ

ಸಪ್ತಸಾಗರ ವಾರ್ತೆ, ಸಿಂದಗಿ, ಅ. 14: ರಂಗದ ಮೇಲೆ ಹಾಸ್ಯದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಜನಮನ್ನಣೆ ಗಳಿಸಿದ್ದ ರಾಜು ತಾಳಿಕೋಟಿ ಎಂಬ ಅದ್ಭುತ ಕಲಾವಿದ ನಗುತ್ತಲೇ ಜೀವನ ರಂಗಕ್ಕೆ ವಿದಾಯ ಹೇಳಿದ್ದಾರೆ. ರಂಗಭೂಮಿ ಇಂಥ ಅದ್ಭುತ ಪ್ರತಿಭೆಯನ್ನು ಕಳೆದುಕೊಂಡು ಬಡವಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ವಿಷಾದಿಸಿದರು.ನಿಧನರಾಗಿರುವ ರಂಗಕರ್ಮಿ, ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ರಾಜು ತಾಳಿಕೋಟಿ ಅವರ ಅಂತಿಮ ದರ್ಶನ ಪಡೆದು ಸಿಂದಗಿ ಕನ್ನಡ ಸಾಹಿತ್ಯ…

Read More