ಗುರುವೆಂದರೆ ಜ್ಞಾನದ ಆತ್ಮನಿದ್ದಂತೆ-ಉಪಮನ್ಯು ಶಿವಾಚಾರ್ಯ ಶ್ರೀಗಳು
ಸಪ್ತಸಾಗರ ವಾರ್ತೆ, ವಿಜಯಪುರ, ಆ. 26:ಅನಾದಿ ಕಾಲದಿಂದಲೂ ಗುರುವನ್ನು ಗೌರವಿಸುವ ಶ್ರೇಷ್ಠ ಸಂಸ್ಕೃತಿ, ಪರಂಪರೆ ಭಾರತದಲ್ಲಿದೆ.ಗುರುವೆಂದರೆ ಜ್ಞಾನದ ಆತ್ಮನಿದ್ದಂತೆ ಎಂದು ಬೀದರ ಜಿಲ್ಲೆಯ ಐನಾಪುರ ಹಿರೇಮಠದ ಷ ಬ್ರ ಉಪಮನ್ಯು ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಸೋಮವಾರದಂದು ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.ಗುರು ಪರಂಪರೆಗೆ ನಮ್ಮ ನಾಡಿನಲ್ಲಿ ದೊಡ್ಡ ಇತಿಹಾಸವೇ ಇದೆ. ಗುರು ಎಂದರೆ ಜನರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ರಾಜಮಾರ್ಗ ಎಂದು ಹೇಳಿದರು.ಅಗರಖೇಡ…


