ವಿಜಯಪುರದಲ್ಲಿ ಗಣೇಶ ವಿಸರ್ಜನೆಗೆ ಪಾಲಿಕೆ ಸಜ್ಜುಕೃತಕ ಹೊಂಡ, ಮೊಬೈಲ್ ಟ್ಯಾಂಕ್ ವ್ಯವಸ್ಥೆ; ಸುರಕ್ಷತೆ, ಸ್ವಚ್ಛತೆಗೆ ಆದ್ಯತೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.14 :ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕವಾಗಿ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ಸುಗಮ, ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿ ನಡೆಯುವಂತೆ ವಿಜಯಪುರ ಮಹಾನಗರ ಪಾಲಿಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.ಸಾರ್ವಜನಿಕರ ಸುರಕ್ಷತೆ, ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಪಾಲಿಕೆ, ನಗರದ ವಿವಿಧೆಡೆ ಕೃತಕ ವಿಸರ್ಜನಾ ಹೊಂಡಗಳು, ಮೊಬೈಲ್ ಟ್ಯಾಂಕ್‌ಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದೆ.ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ಹಿನ್ನೆಲೆಯಲ್ಲಿ ಜೈಲ ದರ್ಗಾ ಸಮೀಪ 100×40 ಅಡಿ…

Read More

‘ಯತ್ನಾಳ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಲಿ’

ಸಿದ್ದರಾಮಯ್ಯ ನಮ್ಮ ನಾಯಕರು; ಸಹಿ ಸಂಗ್ರಹದ ಆರೋಪ ಸುಳ್ಳು: ಎಂ.ಬಿ. ಪಾಟೀಲ್ ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 14:ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಲು ಜಮೀರ್ ಅಹ್ಮದ್ ಖಾನ್, ಸತೀಶ ಜಾರಕಿಹೊಳಿ ಹಾಗೂ ತಾವು ವಿರೋಧ ವ್ಯಕ್ತಪಡಿಸಿದ್ದೇವೆ. ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡದೇ 36 ಶಾಸಕರ ಸಹಿ ಸಂಗ್ರಹಿಸಲಾಗಿದೆ ಎಂಬ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿರುಗೇಟು ನೀಡಿದರು.ವಿಜಯಪುರ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ…

Read More

ಪ್ರೊ. ಎ.ಎಚ್. ಕೊಳಮಲಿ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿಗೆ ಆಯ್ಕೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 13:ಮುದ್ರಣ ನಗರಿ ಗದಗದಲ್ಲಿ ನಡೆಯುವ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನದಲ್ಲಿ ಐತಿಹಾಸಿಕ ನಗರ ವಿಜಯಪುರದ ಸಾಹಿತಿ, ಸಂಪನ್ಮೂಲ ಶಿಕ್ಷಕ, ವಿಜಯಪುರದ ಚೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಾಹಿತಿ, ಪ್ರೊ. ಎ.ಎಚ್. ಕೊಳಮಲಿಯವರಿಗೆ ಅತ್ಯುತ್ತಮ ಮುಖ್ಯೋಪಾಧ್ಯಾಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು.ಈ ಪ್ರಶಸ್ತಿಯನ್ನು ಗದಗ – ಕಳಸಾಪುರದ ಕಪ್ಪತ್ತಗಿರಿ ಸಾಹಿತ್ಯ ಫೌಂಡೇಶನ್ ರಾಜ್ಯ ಘಟಕದಿಂದ ನೀಡಲಾಗುತ್ತಿದೆ.ಶೈಕ್ಷಣಿಕ ಕ್ಷೇತ್ರದಲ್ಲಿನ ಅಪಾರ ಅನುಭವ, ಮಕ್ಕಳ ಬಗ್ಗೆ ಅಪಾರ ಕಾಳಜಿ, ಶಿಕ್ಷಣ ಕ್ಷೇತ್ರದ ಉತ್ತಮ ಆಡಳಿತದ ಅನುಭವದ ಹಿನ್ನೆಲೆಯಲ್ಲಿ ಪ್ರೊ….

Read More

ರತ್ನಗಳ ರಂಗಿನಲ್ಲಿ ವಿಜಯಪುರ: ಕಲಾತ್ಮಕ ಆಭರಣಗಳ ವೈಭವ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 11: ನಗರದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಶೋರೂಂನಲ್ಲಿ ಆಗಸ್ಟ್ 14ರಿಂದ ನೈಸರ್ಗಿಕ ರತ್ನಗಳಿಂದ ರೂಪುಗೊಂಡ ವಿಶಿಷ್ಟ ಹಾಗೂ ಕಲಾತ್ಮಕ ಶ್ರೇಷ್ಠ ಆಭರಣಗಳ ಪ್ರದರ್ಶನ ನಡೆಯುತ್ತಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ.‘ನಾಯರಾ ಜೆಮ್ಸ್ ಸ್ಟೋನ್ಸ್’ ಚಾಲನೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಈ ವಿಶೇಷ ಪ್ರದರ್ಶನದಲ್ಲಿ ಪ್ರಕೃತಿಯ ಅತ್ಯುತ್ತಮ ರತ್ನಗಳಿಂದ ರೂಪುಗೊಂಡ ವೈವಿಧ್ಯಮಯ ಆಭರಣಗಳನ್ನು ಪ್ರದರ್ಶಿಸಲಾಗುತ್ತಿದೆ. ನೈಸರ್ಗಿಕ ರತ್ನಗಳ ಸೌಂದರ್ಯ, ಸಾಂಪ್ರದಾಯಿಕ ಕಲಾಕೌಶಲ ಹಾಗೂ ಆಧುನಿಕ ವಿನ್ಯಾಸಗಳ ಸಮನ್ವಯ ಈ ಸಂಗ್ರಹದ ವಿಶೇಷತೆಯಾಗಿದೆ.ಚಿನ್ನದಲ್ಲಿ ಕೈಯಿಂದಲೇ ರೂಪಿಸಲ್ಪಟ್ಟ ಅಮೂಲ್ಯ…

Read More

ರಂಗಭೂಮಿ ಉಳಿದರೆ ನಾಟಕ ಪರಂಪರೆ ಉಳಿಯುತ್ತದೆ

ಜಿಲ್ಲೆಗೊಂದರಂತೆ ನಾಟಕೋತ್ಸವ; ಕಲಾವಿದರಿಗೆ ವೇದಿಕೆ ಕಲ್ಪಿಸುವ ಅಕಾಡೆಮಿ ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 11:ನಾಟಕ ಕೇವಲ ಮನರಂಜನೆಯಲ್ಲ; ಅದು ಸಮಾಜದ ವಾಸ್ತವತೆಯನ್ನು ಪ್ರತಿಬಿಂಬಿಸುವ ಹಾಗೂ ಪರಿವರ್ತನೆಯ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ನಾಟಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಹೇಳಿದರು.ನಗರದಲ್ಲಿ ಗುರುವಾರ ಸಂಜೆ ಆರಂಭವಾದ ಜಿಲ್ಲಾ ವೃತ್ತಿ ನಾಟಕೋತ್ಸವದ ಮೊದಲ ದಿನದ ‘ಗ್ರಾಮ ಪಂಚಾಯತ ಗಂಗವ್ವ’ ನಾಟಕವನ್ನು ಉದ್ಘಾಟಿಸಿ…

Read More

ಗ್ಯಾಸ್‌ ಕಟರ್‌ನಿಂದ ಎಟಿಎಂ ಒಡೆದು ₹19.29 ಲಕ್ಷ ಕಳವು

ಮಧ್ಯಪ್ರದೇಶದಲ್ಲಿ ಮೂವರು ಆರೋಪಿಗಳ ಬಂಧನ; ₹3.60 ಲಕ್ಷ ನಗದು, ಸ್ಕಾರ್ಪಿಯೋ ಹಾಗೂ ಗ್ಯಾಸ್‌ ಕಟರ್‌ ವಶ ಸಪ್ತಸಾಗರ ವಾರ್ತೆ,ವಿಜಯಪುರ, ಸೆ.11:ಜಿಲ್ಲೆಯ ಕೂಡಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ಗೊಳಸಂಗಿ ಗ್ರಾಮದ ಸಮೀಪ ಕೆನರಾ ಬ್ಯಾಂಕ್‌ ಎಟಿಎಂಗೆ ಗ್ಯಾಸ್‌ ಕಟರ್‌ ಬಳಸಿ ನುಗ್ಗಿ ₹19.29 ಲಕ್ಷ ಕಳವು ಮಾಡಿದ್ದ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದು, ಹರಿಯಾಣ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ…

Read More

ತಾಜಬಾವಡಿ ಬಳಿ ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ : ಎರಡು ವರ್ಷದಲ್ಲಿ ಕೇಂದ್ರ ಕಾರಾಗೃಹದ ಬಳಿ 4 ಎಕರೆ ಪ್ರದೇಶದಲ್ಲಿ ಬೃಹತ್ ಹೊಂಡ ನಿರ್ಮಾಣ: ಯತ್ನಾಳ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.11: ತಾಜಬಾವಡಿ ಬಳಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಿಸುವುದರ ಜೊತೆಗೆ, ಮುಂದಿನ ಎರಡು ವರ್ಷಗಳಲ್ಲಿ ಕೇಂದ್ರ ಕಾರಾಗೃಹದ ಸಮೀಪ ಸುಮಾರು ನಾಲ್ಕು ಎಕರೆ ಜಮೀನಿನಲ್ಲಿ ಬೃಹತ್ ಗಣೇಶ ವಿಸರ್ಜನಾ ಹೊಂಡ ನಿರ್ಮಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ಸಿದ್ದೇಶ್ವರ ದೇವಸ್ಥಾನ ಆವರಣದ ಶ್ರೀ ಶಿವಾನುಭವ ಮಂಟಪದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಆಯೋಜಿಸಿದ್ದ ನಗರದ ಎಲ್ಲ ಗಣೇಶ ಮಂಡಳಿಗಳ ಪೂರ್ವಭಾವಿ ಸಭೆಯನ್ನು…

Read More

ಅಭಿವೃದ್ಧಿ ಕಾರ್ಯಗಳಿಂದ ಪ್ರೇರಣೆ: ಹೊನವಾಡದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 1: ಬಬಲೇಶ್ವರ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಯೋಜನೆಗಳ ಅನುಷ್ಠಾನದಿಂದ ಪ್ರೇರಿತರಾಗಿ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಬಿಜೆಪಿಯ 50ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಸಮ್ಮುಖದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಮುಖಂಡ ಸುನೀಲ ಅವರ ನೇತೃತ್ವದಲ್ಲಿ ಗುರಪ್ಪ ರಂಗಪ್ಪಗೋಳ, ಕೂಸಪ್ಪ ನರಲೆ, ವಿಠ್ಠಲ ತುಪನೂರ, ಸಾವಿತ್ರಿ ಡೇಂಬ್ರಿ, ಸುರೇಖಾ ಡೇಂಬ್ರಿ ಸೇರಿದಂತೆ 50ಕ್ಕೂ ಹೆಚ್ಚು…

Read More

9 ದಲಿತ ಕುಟುಂಬಗಳಿಗೆ ಮಳಿಗೆ ನೀಡಿ: ಭೀಮ್ ಸೇವಾ ಸಮಿತಿ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 1: ನಗರದ ಚರ್ಮಕಾಯಕ ವೃತ್ತಿದಾರರಾದ 9 ಅರ್ಹ ದಲಿತ ಕುಟುಂಬಗಳಿಗೆ ಶಾಶ್ವತ ಮಳಿಗೆಗಳನ್ನು ಒದಗಿಸಿ, ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ಆಗ್ರಹಿಸಿದೆ.ಈ ಕುರಿತು ಸಮಿತಿಯ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ರಾಮನಗೌಡ ಪಾಟೀಲ (ಯತ್ನಾಳ) ಅವರಿಗೆ ಮನವಿ ಸಲ್ಲಿಸಿದರು.ನಗರದಲ್ಲಿ ಚರ್ಮಕಾಯಕ ವೃತ್ತಿಯನ್ನೇ ಅವಲಂಬಿಸಿಕೊಂಡು…

Read More

ವಿಜಯಪುರ ಜಿಲ್ಲಾದ್ಯಂತ ರೌಡಿಶೀಟರ್‌ಗಳ ಮನೆಗಳ ಮೇಲೆ ಪೊಲೀಸರ ವಿಶೇಷ ತಪಾಸಣೆ

482 ರೌಡಿಶೀಟರ್‌ಗಳ ಮನೆಗಳ ಪರಿಶೀಲನೆ; ದಾಖಲೆ ಇಲ್ಲದ ವಾಹನ, ಆಸ್ತಿ ದಾಖಲೆ ಪತ್ತೆ ಸಪ್ತಸಾಗರ ವಾರ್ತೆ,ವಿಜಯಪುರ, ಆ.30:ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸುವ ಉದ್ದೇಶದಿಂದ ವಿಜಯಪುರ ಜಿಲ್ಲಾ ಪೊಲೀಸರು ರೌಡಿ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಿ, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆ ಹಾಗೂ ವೃತ್ತ ಮಟ್ಟದಲ್ಲಿ ‘ರೌಡಿ ನಿಗ್ರಹ ದಳ’ (Anti Rowdy Squad) ರಚಿಸಲಾಗಿದ್ದು, ರೌಡಿಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ.ಇದರ ಭಾಗವಾಗಿ ಆ.30ರಂದು…

Read More