ಸೆ.10ರಿಂದ ವಿಜಯಪುರದಲ್ಲಿ ಅಗ್ನಿವೀರ ನೇಮಕಾತಿ ರ‍್ಯಾಲಿ : ಸುಗಮ ಹಾಗೂ ಪಾರದರ್ಶಕ ನಿರ್ವಹಣೆಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ.12:ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 10ರಿಂದ 23ರವರೆಗೆ ಭಾರತೀಯ ಸೇನೆಯ ಅಗ್ನಿವೀರ ನೇಮಕಾತಿ ರ‍್ಯಾಲಿ ನಡೆಯಲಿದ್ದು, ರ‍್ಯಾಲಿಯನ್ನು ಶಿಸ್ತುಬದ್ಧ, ಸುಗಮ ಹಾಗೂ ಪಾರದರ್ಶಕವಾಗಿ ನಡೆಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಪೂರ್ಣ ಪ್ರಮಾಣದ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳೂರಿನ ಸೇನಾ ನೇಮಕಾತಿ ಕಚೇರಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರ‍್ಯಾಲಿಯು ಪ್ರತಿದಿನ…

Read More

11 ಗಂಟೆಗಳ ಕಾಲ ಮೊಳಗಿದ ಸಂಗೀತ ಸುಧೆ! ವಿಜಯಪುರದ 34 ಕಲಾವಿದರಿಂದ ಶಾಸ್ತ್ರೀಯ ರಾಗಗಳ ರಸದೌತಣ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 11:ಬೆಳಗಿನ 9ರಿಂದ ರಾತ್ರಿ 11ರವರೆಗೆ ನಿರಂತರವಾಗಿ ಮೊಳಗಿದ ಶಾಸ್ತ್ರೀಯ ರಾಗಗಳು… ಒಂದೆಡೆ ಸಂಗೀತದ ಸೊಬಗು, ಮತ್ತೊಂದೆಡೆ ಕಲಾವಿದರ ಅದ್ಭುತ ಪ್ರಸ್ತುತಿ… ಅಪಾರ ಸಂಖ್ಯೆಯ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದ ಅಪೂರ್ವ ಕ್ಷಣಗಳಿಗೆ ವಿಜಯಪುರ ಸಾಕ್ಷಿಯಾಯಿತು.ನಗರದ ವಿಶ್ರಾಮ ಹೋಟೆಲ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ, ವಿವೇಕಾನಂದ ಸೇವಾ ಸಂಘ ಹಾಗೂ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸ್ವರಾತ್ಮ ಗುರುಕುಲ, ಗೋಕರ್ಣ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಐದನೇ ಶಾಸ್ತ್ರೀಯ ಸಂಗೀತೋತ್ಸವ ಸಂಗೀತ…

Read More

ಶಾಲಾ ಬಸ್ ಚಕ್ರಕ್ಕೆ ಬಾಲಕಿ ಬಲಿ!ಪದ್ಮನಗರದಲ್ಲಿ ದುರಂತ; ಮೂರೂವರೆ ವರ್ಷದ ಶ್ರೀಶಾ ಸ್ಥಳದಲ್ಲೇ ಸಾವು

ಸಪ್ತಸಾಗರ ವಾರ್ತೆ,ವಿಜಯಪುರ, ಆ.11:ಶಾಲಾ ಬಸ್ ಚಾಲಕನ ಅಜಾಗರೂಕತೆ ಹಾಗೂ ಅತಿವೇಗದ ಚಾಲನೆಗೆ ಮೂರೂವರೆ ವರ್ಷದ ಬಾಲಕಿಯೊಬ್ಬಳು ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಗರದ ಪದ್ಮನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.ಸಂಗನಬಸವ ಶಿಶುನಿಕೇತನ ಶಾಲೆಯ ಬಸ್‌ನ್ನು ಚಾಲಕ ಕೆಐಡಿಬಿ ರಸ್ತೆಯಿಂದ ಪದ್ಮನಗರದ ಒಳರಸ್ತೆಯಲ್ಲಿ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ.ಈ ವೇಳೆ ಮನೆಯ ಮುಂಭಾಗ ರಸ್ತೆಯ ಬದಿಯಲ್ಲಿ ನಿಂತಿದ್ದ ಶ್ರೀಶಾ ಸುಹಾಸ ವಾಡಿ (3.5) ಎಂಬ ಬಾಲಕಿಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ…

Read More

ಶ್ರೀಶೈಲ ಭಕ್ತರಿಗೆ ಸಿಹಿಸುದ್ದಿ: ವಿಜಯಪುರದಿಂದ ನಾನ್‌-ಎಸಿ ಸ್ಲೀಪರ್‌ ಬಸ್‌ ಸೇವೆ

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಪ್ರತಿದಿನ ವಿಶೇಷ ಬಸ್‌ ಸಂಚಾರ | ಗುಂಪು ಪ್ರಯಾಣಕ್ಕೂ ಕರಾರು ಆಧಾರದಲ್ಲಿ ಬಸ್‌ ಸೌಲಭ್ಯ ಸಪ್ತಸಾಗರ ವಾರ್ತೆ,ವಿಜಯಪುರ, ಆ.10:ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಶ್ರೀಶೈಲಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಜಯಪುರದಿಂದ ಶ್ರೀಶೈಲಕ್ಕೆ ವಿಶೇಷ ನಾನ್‌-ಎಸಿ ಸ್ಲೀಪರ್‌ ಬಸ್‌ ಸೇವೆಯನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಆರಂಭಿಸಿದೆ.ವಿಜಯಪುರದಿಂದ ಬಸವನಬಾಗೇವಾಡಿ, ತಾಳಿಕೋಟಿ, ರಾಯಚೂರು ಹಾಗೂ ಕರ್ನೂಲ್‌ ಮಾರ್ಗವಾಗಿ ಶ್ರೀಶೈಲಕ್ಕೆ ‘ಅಮೋಘ ವರ್ಷ’ ನಾನ್‌-ಎಸಿ ಸ್ಲೀಪರ್‌ ಬಸ್‌ ಕಾರ್ಯಾಚರಣೆ ಮಾಡಲಿದೆ.ಈ ಬಸ್‌ ಪ್ರತಿದಿನ ಸಂಜೆ 6 ಗಂಟೆಗೆ ವಿಜಯಪುರದಿಂದ…

Read More

ಕಟ್ಟಡಗಳಲ್ಲ; ವ್ಯಕ್ತಿತ್ವಗಳ ನಿರ್ಮಾಣವೇ ನಿಜವಾದ ರಾಷ್ಟ್ರ ನಿರ್ಮಾಣ!

ಡಾ. ಎಸ್.ಎ. ಪುಣೇಕರ್‌ ಅವರ ಶೈಕ್ಷಣಿಕ ದೂರದೃಷ್ಟಿ ಇಂದಿನ ಪೀಳಿಗೆಗೆ ದಾರಿದೀಪ: ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಸಪ್ತಸಾಗರ ವಾರ್ತೆ | ವಿಜಯಪುರ, ಆ.9 ದೇಶ ನಿರ್ಮಾಣವೆಂದರೆ ಕೇವಲ ರಸ್ತೆ, ಕಟ್ಟಡ ಹಾಗೂ ಮೂಲಸೌಕರ್ಯಗಳ ನಿರ್ಮಾಣವಲ್ಲ. ಉತ್ತಮ ವ್ಯಕ್ತಿತ್ವದ ಜನರನ್ನು, ಜವಾಬ್ದಾರಿಯುತ ನಾಗರಿಕರನ್ನು ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಪೀಳಿಗೆಯನ್ನು ರೂಪಿಸುವುದೇ ನಿಜವಾದ ರಾಷ್ಟ್ರ ನಿರ್ಮಾಣ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಪ್ರತಿಪಾದಿಸಿದರು.ನಗರದಲ್ಲಿ ಸಿಕ್ಯಾಬ್ ಅಸೋಸಿಯೇಷನ್ ಸಂಸ್ಥಾಪಕ ದಿವಂಗತ ಡಾ. ಎಸ್.ಎ. ಪುಣೇಕರ್ ಅವರ ಸ್ಮರಣಾರ್ಥ…

Read More

ವಿಜಯಪುರಕ್ಕೆ ನಿತ್ಯ ನೀರು; ತೆರಿಗೆಗೂ ಟೈಟ್!

ಬರದ ಮುನ್ಸೂಚನೆ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವರ ಖಡಕ್ ಸೂಚನೆ ಮೂರನೇ ಹಂತದ ನೀರಿನ ಯೋಜನೆಗೆ ವೇಗ: ಎಂ.ಬಿ. ಪಾಟೀಲ ಸಪ್ತಸಾಗರ ವಾರ್ತೆ,ವಿಜಯಪುರ, ಆ.9: ಮುಂಗಾರು ಮಳೆ ಕೊರತೆಯ ಹಿನ್ನೆಲೆಯಲ್ಲಿ ಸಂಭವನೀಯ ಬರ ಪರಿಸ್ಥಿತಿಯನ್ನು ಎದುರಿಸಲು ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಮುಂಜಾಗ್ರತಾ ಸಂಗ್ರಹಕ್ಕೆ ಒತ್ತು ನೀಡುವುದರ ಜತೆಗೆ, ನಿತ್ಯ ನೀರು ಪೂರೈಕೆ, ಸ್ವಚ್ಛತೆ ಹಾಗೂ ತೆರಿಗೆ ವಸೂಲಾತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ…

Read More

ಕ್ರೂಸರ್ ಅಟ್ಟಹಾಸಕ್ಕೆ ಬೈಕ್ ಸವಾರ ಬಲಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ.9: ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಕ್ರೂಸರ್ ಜೀಪ್‌ವೊಂದು ಬೈಕ್ ಹಾಗೂ ಗೂಡ್ಸ್ ಟಂಟಂಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಗರದ ಬಾಗಲಕೋಟೆ ರಸ್ತೆಯ ದಾತ್ರಿ ಮಸೀದಿ ಬಳಿ ಶನಿವಾರ ರಾತ್ರಿ ನಡೆದಿದೆ.ಜಂಬಗಿ ಕೆ.ಡಿ. ಗ್ರಾಮದ ನಿವಾಸಿ, ಸದ್ಯ ವಿಜಯಪುರದಲ್ಲಿ ವಾಸವಿರುವ ಬಸವರಾಜ ಸದಾಶಿವ ದಳವಾಯಿ ಎಂಬಾತ ಕೆಎ-29-4418 ಸಂಖ್ಯೆಯ ಕ್ರೂಸರ್ ಜೀಪ್ ಅನ್ನು ಕೇಂದ್ರ ಬಸ್ ನಿಲ್ದಾಣದಿಂದ ಬಾಗಲಕೋಟೆ ಕ್ರಾಸ್ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಎನ್ನಲಾಗಿದೆ.ಈ…

Read More

ಬರದ ಬಿಗಿ ಮುಷ್ಟಿಗೆ ವಿಜಯಪುರ ರೈತ

ಶೇ.17ರಷ್ಟು ಮಾತ್ರ ಬಿತ್ತನೆ; ಪೈರು ಒಣಗುವ ಹಂತಕ್ಕೆ | ಗರಿಷ್ಠ ಪರಿಹಾರಕ್ಕೆ ವೈಜ್ಞಾನಿಕ ವರದಿ: ಎಂ.ಬಿ. ಪಾಟೀಲ ಸಪ್ತಸಾಗರ ವಾರ್ತೆ,ವಿಜಯಪುರ, ಆ.9: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ವಿಜಯಪುರ ಜಿಲ್ಲೆಯಲ್ಲಿ ಬರದ ಆತಂಕ ಗಂಭೀರವಾಗಿದ್ದು, ಬಿತ್ತನೆ ಮಾಡಿರುವ ಪೈರುಗಳು ಒಣಗುವ ಹಂತ ತಲುಪಿವೆ. ಜಿಲ್ಲೆಯಾದ್ಯಂತ ಈವರೆಗೆ ಕೇವಲ ಶೇ.17ರಷ್ಟು ಮಾತ್ರ ಬಿತ್ತನೆಯಾಗಿದ್ದು, ಬಹುತೇಕ ಪ್ರದೇಶಗಳಲ್ಲಿ ಬಿತ್ತನೆಯೇ ನಡೆದಿಲ್ಲ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಲಿದ್ದು, ಗರಿಷ್ಠ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ನಿಖರ ಹಾಗೂ ವೈಜ್ಞಾನಿಕ ವರದಿ ಸಿದ್ಧಪಡಿಸುವಂತೆ…

Read More

ನಾಳೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿದತ್ತಕ ಯೋಜನೆ ಹಾಗೂ ಗೌರವ ಸಮರ್ಪಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ.8: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗೌರವಿಸುವ ಉದ್ದೇಶದಿಂದ ಸಿರಿಗನ್ನಡ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿದತ್ತಕ ಯೋಜನೆ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಆ.9ರಂದು ಬೆಳಗ್ಗೆ 10.30ಕ್ಕೆ ನಗರದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ. ವಿ.ಡಿ. ಐಹೊಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಾಹಿತಿ ಹಾಗೂ ಚಿಂತಕ ಡಾ. ಸಂಗಮೇಶ ಮೆತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾಧಕರಿಗೆ ಗೌರವ…

Read More

ಬಸರಕೋಡ ಬಸವೇಶ್ವರ ದೇವಸ್ಥಾನ ಕಳ್ಳತನ ಪ್ರಕರಣ ಭೇದಿಸಿದ ವಿಜಯಪುರ ಪೊಲೀಸರು

₹52.70 ಲಕ್ಷ ಮೌಲ್ಯದ ಬೆಳ್ಳಿ ಮೂರ್ತಿ ಹಾಗೂ ವಸ್ತುಗಳ ವಶ – ಗುಜರಾತ್, ರಾಜಸ್ಥಾನದ ಮೂವರು ಆರೋಪಿಗಳ ಬಂಧನ ಸಪ್ತಸಾಗರ ವಾರ್ತೆ,ವಿಜಯಪುರ, ಆ.6: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಬಹುಚರ್ಚಿತ ಬೆಳ್ಳಿ ಮೂರ್ತಿ ಕಳ್ಳತನ ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ₹52.70 ಲಕ್ಷ ಮೌಲ್ಯದ ಕಳುವಾದ ಮೂರ್ತಿ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ…

Read More