ದೇವರನಿಂಬರಗಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕನ ಅಪಹರಣಕ್ಕೆ ವಿಫಲ ಯತ್ನ: ಆರೋಪಿ ಸೆರೆ

ಸಪ್ತ ಸಾಗರ ವಾರ್ತೆ ವಿಜಯಪುರ, ಅ. 2:ಸೆಪ್ಟೆಂಬರ್ 3ರಂದು ಹಂತಕರ ಗುಂಡಿಗೆ ಬಲಿಯಾಗಿದ್ದ ದೇವರನಿಂಬರಗಿ ಗ್ರಾಮದ ಭೀಮನಗೌಡ ಬಿರಾದಾರ ಎಂಬುವರ ಅಪ್ರಾಪ್ತ ಪುತ್ರನ ಅಪಹರಣಕ್ಕೆ ಗುರುವಾರ ಸಂಜೆ ದೇವರನಿಂಬರಗಿ ಭೀಮನಗೌಡ ಬಿರಾದಾರ ತೋಟದ ನಿವಾಸದ ಬಳಿ ವಿಫಲ ಯತ್ನ ನಡೆದಿದ್ದು, ಈ ಬಗ್ಗೆ ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿದೆ.ಕಳೆದ ಸಪ್ಟೆಂಬರ್ 3 ರಂದು ದೇವರನಿಂಬರಗಿ ಗ್ರಾಮದಲ್ಲಿ ಭೀಮನಗೌಡ ಬಿರಾದಾರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಆದಾಗ್ಯೂ ಗುರುವಾರ ಸಂಜೆ ಭೀಮನಗೌಡ ಅವರ…

Read More

11 ಗಂಟೆಯಲ್ಲಿ 20 ಎಕರೆ ಜಮೀನು ಹರಗಿದ ಎತ್ತುಗಳು

ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:11 ಗಂಟೆಗಳಲ್ಲಿ ನಿರಂತರವಾಗಿ 20 ಎಕರೆ ಹೊಲವನ್ನು ಹರಗಿ ಎತ್ತುಗಳು ಸಾಧನೆ ಮಾಡಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕುದುರಿ ಸಾಲವಾಡಗಿ ಗ್ರಾಮದಲ್ಲಿ ನಡೆದಿದೆ.ಕುದುರಿ ಸಾಲವಾಡಗಿ ಗ್ರಾಮದ ಗುರುಸ್ವಾಮಿ ಚಿಕ್ಕಮಠ ಅವರ ಎತ್ತುಗಳು ಜಾಗೀರದಾರ ಅವರ ಹೊಲದಲ್ಲಿ ಬೆಳಿಗ್ಗೆ 6 ಗಂಟೆಯಿಂದ 4 ಗಂಟೆಯವರೆಗೆಬಿಡದೆ 20 ಎಕರೆ ಜಮೀನು ಹರಗಿ ಸಾಧನೆ ಮಾಡಿವೆ.ಸಾಧನೆ ಮಾಡಿದ ಎತ್ತುಗಳನ್ನು ರೈತರು ಗ್ರಾಮದಲ್ಲಿ ಮೆರವಣಿಗೆ ಮಾಡಿ ಸಂತೋಷ ಹಂಚಿಕೊಂಡರು.ಈ ಸಂದರ್ಭದಲ್ಲಿ ಎತ್ತುಗಳ…

Read More

ಪವಾಡಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವ

ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 20:ತಾಲೂಕಿನ ನಾಗಠಾಣ ಗ್ರಾಮದಲ್ಲಿ ಪವಾಡಪುರುಷ ಗೂಳಪ್ಪ ಮುತ್ಯಾ ಅವರ ಜಾತ್ರಾ ಮಹೋತ್ಸವ ಜು. 23 ಹಾಗೂ ಎರಡು ದಿನಗಳವರೆಗೆ ಜರುಗುವದು.ಜು.23 ರ ರಾತ್ರಿ 8 ಗಂಟೆಗೆ ಕಗ್ಗೋಡ ತಿಪರಾಯ ದೇವರ, ಲಕ್ಷ್ಮೀ ದೇವಿಯ, ತಿಡಗುಂದಿ ಭೀರಪ್ಪ ದೇವರ ಫಲ್ಲಕ್ಕಿ ಆಗಮನವಾಗುವದು. ಚಿತ್ರ ವಿಚಿತ್ರ ಮದ್ದು ಸುಡುವದು. ಡೊಳ್ಳಿನ ಹಾಡಿಕೆ ಇರುವದು.ಜು.24 ರಂದು ಬೆಳಗಿನ ಜಾವ 4 ಗಂಟೆಗೆ ನಾಗಠಾಣ ಭೀರದೇವರ, ಕಗ್ಗೋಡ ತಿಪರಾಯ ದೇವರ, ಲಕ್ಷ್ಮೀ ದೇವಿಯ, ತಿಡಗುಂದಿ ಭೀರಪ್ಪ…

Read More