ಬೀದಿಯಲ್ಲಿ ತ್ಯಾಜ್ಯ ಎಸೆದರೆ, ಪಾಲಿಕೆಯಿಂದ ಕಾನೂನು ಕ್ರಮ-ಎಚ್ಚರಿಕೆ
ಸಪ್ತಸಾಗರ ವಾರ್ತೆ ವಿಜಯಪುರ, ಮೇ 18:ಮಾಂಸ ಮಾರಾಟದ ವರ್ತಕರು, ಉದ್ದಿಮೆದಾರರು ಇತರೆ ತ್ಯಾಜ್ಯವನ್ನು ಬೀದಿಯಲ್ಲಿ ಅಥವಾ ವರಾಂಡದಲ್ಲಿ ಎಸೆಯುವುದು ಹಾಗೂ ಹಾಕುವುದನ್ನು ಮಹಾನಗರ ಪಾಲಿಕೆ ನಿಷೇಧಿಸಿದ್ದು, ಆದಾಗ್ಯೂ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.ತ್ಯಾಜ್ಯ ಉತ್ಪಾದಿಸುವ ಪ್ರತಿಯೊಬ್ಬ ನಾಗರಿಕರು, ಉದ್ದಿಮೆದಾರರು ಎಲ್ಲೆಂದರಲ್ಲಿ ತ್ಯಾಜ್ಯ ವಿಸರ್ಜಿಸದೆ ತ್ಯಾಜ್ಯ ವಿಂಗಡಣೆ ಮಾಡಬೇಕು. ವಿಂಗಡಣೆ ಮಾಡಿದ ತ್ಯಾಜ್ಯವನ್ನು ಮಹಾ ನಗರಪಾಲಿಕೆ ದಿನನಿತ್ಯ ಕಳುಹಿಸಿಕೊಡುವ ತ್ಯಾಜ್ಯ ವಾಹನಕ್ಕೆ…


