ಭೀಮಾ ನದಿಗೆ ಅಪಾರ ಪ್ರಮಾಣದ ನೀರು: ಪ್ರಭಾವದ ಭೀತಿಯಲ್ಲಿ ಜನರು

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 24:ನೆರೆಯ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು,ಭೀಮಾನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ನದಿ ದಂಡೆ ಗ್ರಾಮಗಳ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ.ಚಡಚಣ, ಇಂಡಿ, ಆಲಮೇಲ ತಾಲೂಕಿನ ನದಿ ದಂಡೆ ಗ್ರಾಮದ ಜನತೆಯಲ್ಲಿ ಪ್ರವಾಹದ ಭೀತಿ ಉಂಟಾಗಿದೆ.ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್ ಗಳು ಜಲಾವೃತವಾಗಿವೆ.ಕರ್ನಾಟಕ, ಮಹಾರಾಷ್ಟ ಸರ್ಕಾರಗಳುಭೀಮಾ ನದಿಗೆ ಅಡ್ಡಲಾಗಿ ಸಮಾನಾಂತರವಾಗಿ ನಿರ್ಮಾಣ…

Read More

ಧಾರಾಕಾರ ಮಳೆ: ಮನೆ ಕುಸಿದು ಮೂವರಿಗೆ ಗಾಯ

ಸಪ್ತಸಾಗರ ವಾರ್ತೆ ವಿಜಯಪುರ, ಆ. 28:ಜಿಲ್ಲೆಯಲ್ಲಿ ಗುರುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿಮುದ್ದೇಬಿಹಾಳ ತಾಲೂಕಿನ ಹಿರೇಮುರಾಳ ಗ್ರಾಮದಲ್ಲಿ ಮನೆ ಕುಸಿದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.ಮಲ್ಲವ್ವ ರುದ್ರಪ್ಪ ಗುಂಡುಪಲ್ಲೆ, ರುದ್ರಪ್ಪ ತಮ್ಮಣ್ಣ ಗುಂಡುಪಲ್ಲೆ ಹಾಗೂ ಶಾರದಾ ರುದ್ರಪ್ಪ ಗುಂಡುಪಲ್ಲೆ ಗಾಯಗೊಂಡಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ನಿನ್ನೆ ರಾತ್ರಿ ಸುರಿದ ಮಳೆಯಿಂದ ಹಿರೇಮುರಾಳ ಗ್ರಾಮದಲ್ಲಿ ಸುಮಾರು ರಾತ್ರಿ 12-30 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ಜನರ ಮೇಲೆ ಮನೆ ಕುಸಿದಿದೆ. ಮೂವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ.

Read More

ವಿಜಯಪುರದಲ್ಲಿ ಧಾರಾಕಾರ ಮಳೆ: ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 9:ಜಿಲ್ಲೆಯಲ್ಲಿ ಮತ್ತೆ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದು ಜನರು ತೀವ್ರ ತೊಂದರೆ ಅನುಭವಿಸಿದ್ದರು. ಈ ಮಧ್ಯೆ ಒಂದು ದಿನ ಮಾತ್ರ ಮಳೆ ನಿಂತು ಜನರು ಸೂರ್ಯನ ಮುಖ ಕಂಡಿದ್ದರು.ಶುಕ್ರವಾರ ಸಂಜೆ ನಗರ ಸೇರಿದಂತೆ ಮತ್ತೆ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದ್ದು, ಸತತ ಒಂದು ಗಂಟೆಗೂ ಹೆಚ್ಚು ಕಾಲ ನಗರದಲ್ಲಿ ಧಾರಾಕಾರ ಮಳೆ ಸುರಿದು…

Read More

ಜಮೀನುಗಳಿಗೆ ನೀರು, ಐತಿಹಾಸಿಕ ಕೆರೆಗಳಿಗೆ ಮರುಜೀವ: ಸುನೀಲಗೌಡ

ಸಪ್ತಸಾಗರ ವಾರ್ತೆ, ವಿಜಯಪುರ, ಆ.3:ನೀರಾವರಿ ಯೋಜನೆಗಳಿಂದ ಜಮೀನುಗಳಿಗೆ ನೀರುಣಿಸಿದ್ದು ಮಾತ್ರವಲ್ಲ ಐತಿಹಾಸಿಕ ಕೆರೆಗಳಿಗೂ ಮರುಜೀವ ನೀಡಲಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಶನಿವಾರ ಮುಸ್ಸಂಜೆ ತಿಕೋಟಾ ತಾಲೂಕಿನ ರಾಂಪುರ ಗ್ರಾಮದಲ್ಲಿ ಎಪಿಎಂಸಿ ವತಿಯಿಂದ 2025-26ನೇ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಮಂಜೂರಾದ ರೂ. 20.55 ಲಕ್ಷ ವೆಚ್ಚದ 150 ಎಂ. ಟಿ. ಸಾಮರ್ಥ್ತಯದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಸಚಿವ ಎಂ. ಬಿ. ಪಾಟೀಲ ಅವರು ಅಸಾಧ್ಯವಾದ ಕೆಲಸವನ್ನು…

Read More