ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸವನ್ನು ನೆನಪಿಸುತ್ತದೆ: ವಿದ್ಯಾಧರ ಸಾಲಿ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 20:“ಒಂದು ಛಾಯಾಚಿತ್ರ ಜಗತ್ತಿನ ಇತಿಹಾಸವನ್ನು ನೆನಪಿಸುವುದರ ಜತೆಗೆ, ಮಹತ್ವದ ದಾಖಲೆಯಾಗಿಯೂ ಉಳಿಯುತ್ತದೆ” ಎಂದು ಹಿರಿಯರಾದ ವಿದ್ಯಾಧರ ಸಾಲಿ ಹೇಳಿದರು.ನಗರದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಆಧುನಿಕ ಕಾಲದಲ್ಲಿ ಛಾಯಾಗ್ರಹಣ ವೃತ್ತಿಯಿಂದ ಜೀವನ ನಡೆಸುವುದು ಸವಾಲಿನ ಕೆಲಸವಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಆಧುನಿಕ ಕ್ಯಾಮೆರಾಗಳನ್ನು ಖರೀದಿಸಿ, ಪರಸ್ಪರ ಸ್ಪರ್ಧೆ ಎದುರಿಸಬೇಕಾದ ಪರಿಸ್ಥಿತಿ ಇದೆ. ಹಿಂದಿನ ಕಾಲದ…


