ಸಪ್ತಸಾಗರ ವಾರ್ತೆ ವಿಜಯಪುರ, ಸೆ. 5: ಇಲ್ಲಿನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಪ್ರೌಢಶಾಲೆ, ಸಿದ್ದಾರ್ಥ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪಿಯು ಕಾಲೇಜು ಮತ್ತು ಡಿಗ್ರಿ ಕಾಲೇಜಿನಲ್ಲಿ ಶುಕ್ರವಾರ ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಜ್ಯೋತಿಬಾಪುಲೆ ಶಿಕ್ಷಕ ದಿನವನ್ನು ಆಚರಿಸಲಾಯಿತು.
ಸಂಸ್ಥೆಯ ಸಂಸ್ಥಾಪಕ ತುಕಾರಾಂ ಚಂಚಲಕರ ಅವರು ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಚಂಚಲಕರ ಅವರು ಮಾತನಾಡಿ, ಆಗಿನ ಕಾಲಘಟ್ಟದಲ್ಲಿ ಶಿಕ್ಷಣದ ಕೊರತೆ ಇದ್ದುದರಿಂದ ಬಹಳ ಪ್ರಯತ್ನಪಟ್ಟು ಮಾತೆ ಸಾವಿತ್ರಿಬಾಯಿ ಅವರು ಎಲ್ಲಾ ಮಕ್ಕಳನ್ನು ತನ್ನ ಮಕ್ಕಳಂತೆ ಭಾವಿಸಿ ರಾತ್ರಿ ಶಾಲೆ, ವಸತಿ ಶಾಲೆಗಳನ್ನು ತೆರೆದು ಜ್ಯೋತಿಬಾ ಪುಲೆ ಅವರ ಜೊತೆಗೂಡಿ ಹಸಿದ ಮಕ್ಕಳಿಗೆ ಅನ್ನದ ಜೊತೆಗೆ ಅಕ್ಷರವನ್ನು ಕಲಿಸಿದ ಮಹಾಮಾತೆಯಾಗಿದ್ದರು ಎಂದರು.
ಶಾಲೆಗೆ ಹೊರಟಾಗ ಮೇಲ್ವರ್ಗದ ಜನ ಶಾಲೆ ಕಲಿಸಲು ತಡೆಹಿಡಿಯುತ್ತಿದ್ದರು. ಆದರೂ ಸಹಿತ ದಿಟ್ಟ ನಿರ್ಧಾರ ತೆಗೆದುಕೊಂಡು ನಿರ್ಗತಿಕ ಬಡ ಮಕ್ಕಳಿಗೆ ನಿಮ್ನ ವರ್ಗದ ಹಾಗೂ ಅನಾಥ ಮಕ್ಕಳಿಗೆ ತಾಯಿ ತಂದೆಯಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದರು.
ಅದೇ ರೀತಿ ಭಾರತ ರತ್ನ ಸರ್ವಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನು ಆಚರಿಸಿರಿ ಎಂದು ತಮ್ಮ ಜೀವನದುದ್ದಕ್ಕೂ ವಿದ್ಯಾರ್ಥಿಗಳಿಗೆ ಸಿಹಿಯನ್ನೇ ಬಡಿಸಿದರು. ದೇಶ ಕಂಡ ರಾಷ್ಟ್ರಪತಿಗಳಾಗಿ ಇಡೀ ಭಾರತಕ್ಕೆ ಅಷ್ಟೇ ಅಲ್ಲ ಪ್ರಪಂಚಕ್ಕೆ ಭಾರತ ಏನು ಎಂಬುದನ್ನು ತಿಳಿಸಿದ್ದರು ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಗುರುಗಳಾದ ಎಸ್. ಎಸ್. ಗುಡ್ಲನವರ, ಎಸ್.ಆರ್. ಪು ಲಾರಿ, ರಾಮು ಯಾರವಳ್ಳಿ, ಚಂದ್ರಶೇಖರ ಈ.ಟಿ., ಎಸ್.ಆರ್. ಬಸರಗಿ, ಮುಖ್ಯ ಗುರುಮಾತೆ ವೀಣಾ ಶಿರಗುಪ್ಪಿ ಉಪಸ್ಥಿತರಿದ್ದರು.
ಸಚಿನ ನಾಯಕ ಸ್ವಾಗತಿಸಿ, ವಂದಿಸಿದರು.
ರಮಾಬಾಯಿ ಪ್ರೌಢಶಾಲೆಯಲ್ಲಿ ಶಿಕ್ಷಕ ದಿನಾಚರಣೆ
