ಶಿಕ್ಷಕರು ಬಡವರಾಗಿದ್ದರೂ ಹೃದಯ ಶ್ರೀಮಂತರು: ಸೋಮನಾಳ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 6:
ಶಿಕ್ಷಕರು ಆರ್ಥಿಕವಾಗಿ ಬಡವರಾದ್ದರೂ, ಹೃದಯದಿಂದ ಶ್ರೀಮಂತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲ ಸಚಿವ (ಆಡಳಿತ) ಶಂಕರಗೌಡ ಸೋಮನಾಳ ಹೇಳಿದರು.
ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ,
ನಿರಂತರ ಅಧ್ಯಯನ, ಪ್ರಾಮಾಣಿಕ, ಸೃಜನಶೀಲತೆ ಮತ್ತು ಅತ್ಯುತ್ತಮ ಮೌಲ್ಯಗಳು, ಸಮರ್ಪಿತ ಗುಣಗಳು ಶಿಕ್ಷಕರು ಹೊಂದಿರಬೇಕು. ಶಿಕ್ಷಕರು ಆರ್ಥಿಕವಾಗಿ ಬಡವರಾಗಿದ್ದರೂ ಹೃದಯದಿಂದ ಶ್ರೀಮಂತರಾಗಿದ್ದಾರೆ ಪ್ರತಿಯೊಬ್ಬರಲ್ಲಿಯೂ ಶಿಕ್ಷಕರ ಸ್ವರೂಪವನ್ನು ಕಾಣುವ ಮೂಲಕ ಸಮಾಜದ ಮೌಲ್ಯಗಳನ್ನು ಹೆಚ್ಚಿಸೋಣ ಎಂದು ಹೇಳಿದರು.
ಸಹ ಪ್ರಾಧ್ಯಾಪಕ ಡಾ. ಎಂ.ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರ ಜೀವನ ಚರಿತ್ರೆ ಮತ್ತು ಜೆ.ಎಸ್. ಶಿಕ್ಷಣ ಮಹಾವಿದ್ಯಾಲಯದ ಸ್ಥಾಪನೆಯು ಶಿಕ್ಷಕರ ದಿನಾಚರಣೆ ದಿನದಂದು ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಸ್. ಆವರಣದ ಆಡಳಿತಾಧಿಕಾರಿಯಾದ ಪ್ರೊ. ಐ. ಎಸ್. ಕಾಳಪ್ಪನವರ ವಹಿಸಿ ಮಾತನಾಡಿ, ಇಚ್ಚಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿ ಶಿಕ್ಷಕರಿಗೆ ಇರಬೇಕು. ಅಂತರಂಗ ಮತ್ತು ಬಹಿರಂಗ ಎರಡು ಪರಿಶುದ್ಧವಾಗಿರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವೃತ್ತಿ ಪದೋನ್ನತಿ ಹೊಂದಿರುವ ಪ್ರಾಚಾರ್ಯ ಡಾ. ಭಾರತಿ ವಾಯ್. ಖಾಸನೀಸ ಅವರನ್ನು ಸನ್ಮಾನಿಸಲಾಯಿತು.
ಸಂಶೋಧನಾ ವಿದ್ಯಾರ್ಥಿನಿ ಸುಜಾತ ಶಿವಪ್ಪ ಮತ್ತಿವಾಡ ಅವರು ರಚಿಸಿದ “ಪುಸ್ತಕದಾಚೆಗಿನ ಪಾಠಗಳು :ಆದರ್ಶ ಶಿಕ್ಷಕನ ಪಯನ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ಜೆ.ಎಸ್. ಪಟ್ಟಣಶೆಟ್ಟಿ, ಡಾ. ಬಿ.ಎಸ್. ಹಿರೇಮಠ, ಎಸ್. ಎಸ್. ಪಾಟೀಲ, ಪಿ.ಡಿ ಮುಲ್ತಾನಿ, ಡಾ. ಎಸ್.ಪಿ. ಶೇಗುಣಸಿ, ದೈಹಿಕ ಶಿಕ್ಷಣ ನಿರ್ದೇಶಕ ಎಂ. ಪಿ. ಕುಪ್ಪಿ ಹಾಗೂ ಎಸ್.ಎಸ್. ಪದವಿ ಪೂರ್ವ ಕಾಲೇಜಿನ (ಮಾಧ್ಯಮಿಕ ವಿಭಾಗ) ಉಪ ಪ್ರಾಚಾರ್ಯೆವಿದ್ಯಾ ಪಾಟೀಲ, ಹಿಂದಿ ಶಿಕ್ಷಕಿ ತ್ರಿವೇಣಿ ಜಾನಕಾರ ಮತ್ತು ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಚಾರ್ಯ ಡಾ. ಭಾರತಿ ವಾಯ್. ಖಾಸನೀಸ ಸ್ವಾಗತಿಸಿದರು.
ಪ್ರಶಿಕ್ಷಣಾರ್ಥಿಗಳಾದ ಅಶ್ವಿನಿ ಜಿತ್ತಿ ಮತ್ತು ಸುಷ್ಮಾ ಸಿದ್ದಾಪುರ ನಿರೂಪಿಸಿದರು.
ಸಹ ಪ್ರಾಧ್ಯಾಪಕ ಡಾ. ಎಂ.ಬಿ. ಕೋರಿ ವಂದಿಸಿದರು.

Share this