ಸಪ್ತಸಾಗರ ವಾರ್ತೆ ವಿಜಯಪುರ, ಆ.15:
ಕನಾ೯ಟಕ ರಾಜ್ಯ ಆದಿಜಾಂಬವ ಸಂಘ ಜಿಲ್ಲಾ ಸಮಿತಿ ವತಿಯಿಂದ ಒಳ ಮೀಸಲಾತಿ ಅತಿ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹನುಮಂತ ಬಿರಾದಾರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರಭು ಖಾನಾಪುರ ಸಂಘಟನೆಯ ಪದಾಧಿಕಾರಿಗಳಾದ ಪರಶುರಾಮ ರೋಣಿಹಾಳ, ಎಂ.ಆರ್. ದೊಡಮನಿ, ಲಚಪ್ಪ ಮಾದರ, ಬೆಳಗಾವಿ ವಿಭಾಗದ ಪ್ರಚಾರ ಸಮಿತಿ ಅಧ್ಯಕ್ಷ ಎಲ್. ಎಂ. ಬೆಳ್ಳುಳ್ಳಿ, ಪರಶುರಾಮ ಚಕ್ರವರ್ತಿ, ವಿಠಲ ಕವಲಗಿ, ಸಾಬು ಗುಣದಾಳ, ವಿಜಯ ಮಾದರ, ಸಮಾಜದ ಹಿರಿಯ ಮುಖಂಡರಾದ ಅಯ್ಯಪ್ಪ ದೊಡಮನಿ, ಪ್ರಶಾಂತ ದೊಡಮನಿ ಯಲ್ಲೂ ಇಂಗಳಗಿ, ಜಿ.ಕೆ. ಯತ್ನಾಳ ಇನ್ನೂ ಹಲವಾರು ಮುಖಂಡರು ಇದ್ದರು.
ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಆದಿ ಜಾಂಬವ ಸಂಘದಿಂದ ಸಚಿವ ಎಂ.ಬಿ. ಪಾಟೀಲರಿಗೆ ಮನವಿ


