ವಿಚ್ಛೇದನದ ವಾಸ್ತವಕ್ಕೆ ಹಿಡಿದ ಕನ್ನಡಿ ‘ಪ್ರೇಮ್ ಲವ್ಸ್ ನಂದಿನಿ’ ಚಿತ್ರದಲ್ಲಿವಿಜಯಪುರದ ವಿಶ್ವಪ್ರಕಾಶ ಮಲಗೊಂಡ ಅಭಿನಯ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 16 :
ಇಂದಿನ ಯುವ ಪೀಳಿಗೆಯ ಪ್ರೇಮ ಮತ್ತು ವಿಚ್ಛೇದನದಂತಹ ಸಂಕೀರ್ಣ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ‘ಪ್ರೇಮ್ ಲವ್ಸ್ ನಂದಿನಿ’ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಬಿ ಆರ್ ಫಿಲಂ ಐಕಾನ್ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಸವರಾಜ ನಂದಿ ನಿರ್ಮಾಣದ ಈ ಚಿತ್ರಕ್ಕೆ ಮಹಿಳಾ ನಿರ್ದೇಶಕಿ ಸುಧಾ ಅಣ್ಣಾಶೇಠ ಆ್ಯಕ್ಷನ್ ಕಟ್ ಹೇಳಿದ್ದಾರೆ.
ವಿಜಯಪುರದ ನಟ ವಿಶ್ವಪ್ರಕಾಶ ಟಿ ಮಲಗೊಂಡ ನಾಯಕನಾಗಿ ನಟಿಸಿದ 20ನೇ ಕಿರುಚಿತ್ರ ಇದಾಗಿದ್ದು, ಸಿರಿ ವೆಂಕಟೇಶ್ ಜೋಡಿಯಾಗಿದ್ದಾರೆ. ಪ್ರೇಮದ ಆಕರ್ಷಣೆಯಿಂದ ಶುರುವಾಗಿ ‘ಡೈವೋರ್ಸ್’ ಹಂತ ತಲುಪುವ ಇಂದಿನ ಸಂಬಂಧಗಳ ವಾಸ್ತವ ಸ್ಥಿತಿಯನ್ನು ಚಿತ್ರವು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಶಿವರಾತ್ರಿ ಹಾಗೂ ಪ್ರೇಮಿಗಳ ದಿನದ ವಿಶೇಷವಾಗಿ ಬಿಡುಗಡೆಯಾಗಿರುವ ಈ ಕಿರುಚಿತ್ರ, ಸಮಾಜಕ್ಕೆ ಒಂದು ಗಟ್ಟಿ ಸಂದೇಶ ನೀಡುವಲ್ಲಿ ಯಶಸ್ವಿಯಾಗಿದೆ.
ಇನ್ನು ಈ ಚಿತ್ರಕ್ಕೆ ಬಸವರಾಜ ನಂದಿ ಹಾಗೂ ಸಚಿನ್ ಅವರ ಛಾಯಾಗ್ರಾಹಣವಿದ್ದು, ಪ್ರಜ್ವಲ್ ನಂದಿ ಅವರ ಸಂಕಲನ, ಕ್ರಿಯೇಟಿವ್ ಹೆಡ್ ಆಗಿ ಅಣ್ಣಾಶೇಠ ಅವರು ಕಾರ್ಯ ನಿರ್ವಹಿಸಿದ್ದು, ಪ್ರಸಾದ ತೋಟದ ಅವರ ಪೋಸ್ಟರ್ ಡಿಸೈನ್, ಮೇಕಪ್ ಮಧು, ಡಾ. ಪ್ರಭು ಗಂಜಿಹಾಳ, ಡಾ. ವಿರೇಶ್ ಹಂಡಗಿ, ಹರೀಶ್ ಅರಸು ಅವರ ಪತ್ರಿಕಾ ಸಂಪರ್ಕ, ಉಮೇಶ್ ಕೆ ಎನ್ ಅವರು ಪಬ್ಲಿಸಿಟಿ ಜವಾಬ್ದಾರಿ ಹೊತ್ತಿದ್ದು, ನಿಂಗರಾಜ ಕಟ್ಟಿಗೇರಿ ಹೀಗೆ ಅನೇಕರು ತಂತ್ರಜ್ಞಾನದಲ್ಲಿದ್ದಾರೆ.

Share this