ಆದ್ಯ ವಚನಕಾರ ದೇವರ ದಾಸಿಮಯ್ಯ ಜಾಡ ಕುಲತಿಲಕ – ಡಾ. ಎಂ.ಎಸ್. ದಡ್ಡೇನವರ

ಸಪ್ತ ಸಾಗರ ವಾರ್ತೆ,ವಿಜಯಪುರ, ಆ. 24:
ದೇವರ ದಾಸಿಮಯ್ಯನವರು ಬಸವಪೂರ್ವ ಶರಣ, ಆದ್ಯ ವಚನಕಾರನಾಗಿ ಹನ್ನೆರಡನೇ ಶತಮಾನದ ಅನುಭವ ಮಂಟಪದ ಎಲ್ಲ ಶರಣರಿಗೆ ಮಾರ್ಗದರ್ಶಿ ವಚನಗಳನ್ನು ಮೊದಲ ಬಾರಿಗೆ ಸರಳವಾಗಿ ನೀಡಿದ ಮಹಾನುಭಾವರು. ಇಂದು ಅವರ ಹೆಸರಿನಲ್ಲಿ ಸಭಾಭವನ ಉದ್ಘಾಟನೆಗೊಳ್ಳುತ್ತಿರುವದು ಬಹಳ ಸಂತೋಷ. ದಾಸಿಮಯ್ಯನವರು ಜಾಡ ಕುಲತಿಲಕರಾಗಿದ್ದಾರೆ ಎಂದು ಡಾ. ಎಂ. ಎಸ್. ದಡ್ಡೆನವರ ಹೇಳಿದರು.
ರವಿವಾರ ನಗರದ ವೇದಮಾತೆ ಗಾಯತ್ರಿ ಪ್ರತಿಷ್ಠಾನದ ಆವರಣದಲ್ಲಿ ಆದ್ಯವಚನಕಾರ ದೇವರ ದಾಸಿಮಯ್ಯ ಸಭಾಭವನ ಉದ್ಘಾಟಿಸಿ ಮಾತನಾಡಿದ ಅವರು, ನೇಕಾರ ಸಮಾಜದ ಆದ್ಯಗುರುವಾದ ದಾಸಿಮಯ್ಯನವರು ನಮ್ಮ ಹೆಮ್ಮೆ ಎಂದರು.
ವಿ.ಎಸ್. ಜಿ ಮಹಾವಿದ್ಯಾಲಯದ ಚೇರಮನ್ ಡಾ.ಸಂಗಮೇಶ ಮೇತ್ರಿ ಮಾತನಾಡಿ, ವೇದಮಾತೆ ಗಾಯತ್ರಿ ಪ್ರತಿಷ್ಠಾನ ತ್ರಿವಿಧ ದಾಸೋಹ ಕಡೆ ವಾಲುತ್ತಿರುವದು ಸಂತೋಷದ ವಿಷಯ.ಈ ನಿಟ್ಟಿನಲ್ಲಿ ನೇಕಾರ ಬಂಧುಗಳು ಕೈ ಜೋಡಿಸಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಡಾ. ಸುರೇಶ ಗುಗ್ಗರಿಗೌಡರ ಮತ್ತು ಆನಂದ ಹುಲಮನಿ ಮಾತನಾಡಿದರು.
ವೇದಿಕೆ ಮೇಲೆ ಸಂಗಪ್ಪ ಜಾಲವಾದಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಎನ್.ಎಂ. ಪ್ಯಾಟಿ ಮಾತನಾಡಿ, ಪ್ರತಿಷ್ಠಾನದ ಅಭಿವೃದ್ಧಿಗೆ ಸಮಾಜ ಬಾಂಧವರು ಕೈ ಜೋಡಿಸಲು ತಿಳಿಸಿದರು.
ಪ್ರವೀಣ ಬಸರಕೋಡ ಸ್ವಾಗತಿಸಿ, ನಿರೂಪಿಸಿದರು.
ವಿದ್ಯಾ ದಿನ್ನಿಮನಿ, ಶಾಂತಾ ಕೊಳ್ಳಿ, ಮಂಜುಳಾ ಕಂಠಿ, ರಾಜೇಶ್ವರಿ ಹಟಗಾರ, ಪ್ರಸಾದ ಬಸರಕೋಡ, ವಿನೀತ ದಿನ್ನಿಮನಿ, ನಾಗೇಶ ಭಾವಿಕಟ್ಟಿ, ಅಮರೇಶ ಕೋಚಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share