ಸಪ್ತಸಾಗರ ವಾರ್ತೆ ವಿಜಯಪುರ,ಅ. 8:
ಹಿಂದೂ ಧರ್ಮದ ಪವಿತ್ರ
ಗ್ರಂಥವಾದ ರಾಮಾಯಣವನ್ನು ರಚಿಸುವುದರ ಮೂಲಕ ಹಿಂದೂ ಧರ್ಮಕ್ಕೆ ಅಪಾರ ಕೊಡುಗೆಯನ್ನು ನೀಡಿದ ಜಗತ್ತಿನ ಮಹಾನ್ ಜ್ಞಾನಿ ವಾಲ್ಮೀಕಿ ಋಷಿ ಎಂದು ಸಾಹಿತಿ ಪ್ರೊ. ಎ.ಎಚ್. ಕೊಳಮಲಿ ಹೇಳಿದರು.
ಮಂಗಳವಾರ ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಪಬ್ಲಿಕ್ ಶಾಲೆ ಹಾಗೂ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ಹಮ್ಮಿಕೊಂಡ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ವಾಲ್ಮೀಕಿ ಋಷಿಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ವಿಶೇಷ ಉಪನ್ಯಾಸವನ್ನು ನೀಡಿದರು. ರತ್ನಾಕರನಾಗಿ ಜನಿಸಿದ ಋಷಿ ವಾಲ್ಮೀಕಿಯು ನಾರದ ಋಷಿಯನ್ನು ಭೇಟಿಯಾದ ನಂತರ ಅವರ ಜೀವನ ತಿರುಗು ಪಡೆದು ಮಹಾನುಭ್ಯಕ್ತಿಯಾಗಿ ಹೊರಹೊಮ್ಮಿ ಜಗವನ್ನು ಬೆಳಗಿದ ಮಹಾನ್ ಮೇಧಾವಿ ವಾಲ್ಮೀಕಿ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಪ್ರಭು ಕೊಳಮಲಿ ಮಾತನಾಡಿ, ವಾಲ್ಮೀಕಿಯ ಬೋಧನೆಗಳು ರಾಮನ ಮೌಲ್ಯಗಳನು ಉತ್ತೇಜಿಸುತ್ತವೆ. ಜೊತೆಗೆ ಸತ್ಯ ಕರ್ತವ್ಯ ಮತ್ತು ಕರುಣೆಯನ್ನು ಒತ್ತಿ ಹೇಳುತ್ತವೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ರಾಮಸ್ವಾಮಿ ಕೊಳಮಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಸರಸ್ವತಿ ಕೊಳಮಲಿ, ರಾಜಶ್ರೀ ಕೊಳಮಲಿ, ಶಿಕ್ಷಕಿಯರಾದ ಲಕ್ಷ್ಮಿ ಮುಂಜೆಲಿ, ಸುಧಾ ಬಿರಾದಾರ, ತೇಜಸ್ವಿನಿ ಲಚ್ಯಾಣ ಉಪಸ್ಥಿತರಿದ್ದರು. ಶಿಕ್ಷಕ ಗಂಗಾಧರ ಲಚ್ಚಾಣ ಸ್ವಾಗತಿಸಿ, ನಿರೂಪಿಸಿದರು.
ಜಗತ್ತಿನ ಮಹಾನ್ ಜ್ಞಾನಿ ಮಹರ್ಷಿ ವಾಲ್ಮೀಕಿ – ಸಾಹಿತಿ ಪ್ರೊ. ಎ.ಎಚ್. ಕೊಳಮಲಿ


