ಸಪ್ತಸಾಗರ ವಾರ್ತೆ, ವಿಜಯಪುರ, ನ. 26:
ಗೃಹ ಸಚಿವ ಜಿ. ಪರಮೇಶ್ವರ್ ಅವರ ಕಾರಿನ ಇಂಧನ ಖಾಲಿಯಾಗಿ ಬೇರೆ ಕಾರಿನಲ್ಲಿ ಬೆಳಗಾವಿಗೆ ಪ್ರಯಾಣ ಬೆಳೆಸಿದ ಘಟನೆ ನಡೆದಿದೆ.
ಮಾಜಿ ಶಾಸಕ ರಾಜು ಆಲಗೂರ ಅವರ ಪುತ್ರಿ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದರು.
ಬೆಳಗಾವಿಗೆ ವಾಪಸ್ಸು ತೆರಳಲು ಅಣಿಯಾದಾಗ ಕಾರಿನ ಇಂಧನ ಖಾಲಿಯಾದ ವಿಷಯ ಗೊತ್ತಾಗಿದೆ.
ಅವರ ಕಾರು ಚಾಲಕ ಇಂಧನ ಭರಿಸಲು ತೆರಳಿದ. ಕಾರು ಚಾಲಕ ವಾಪಸ್ಸು ಬರುವ ವೇಳೆ ದಾರಿ ತಪ್ಪಿದ್ದಾನೆ. ದಾರಿ ತಪ್ಪಿ ಅಲ್ಲಿ ಇಲ್ಲಿ ಸುತ್ತಾಡಿ ಬರುವಷ್ಟರಲ್ಲಿ ಬಹಳಷ್ಟು ವಿಳಂಬವಾಯಿತು. ಇದರಿಂದಾಗಿ ಸಚಿವ ಪರಮೇಶ್ವರ್ ಬೇರೆ ಕಾರಿನಲ್ಲಿ ಬೆಳಗಾವಿಗೆ ಪ್ರಯಾಣ ಬೆಳೆಸಬೇಕಾದ ಪ್ರಸಂಗ ಎದುರಾಯಿತು.
ಗೃಹ ಸಚಿವ ಜಿ. ಪರಮೇಶ್ವರ
ಅವರು ವಾಪಸ್ ಬೆಳಗಾವಿಗೆ ತೆರಳುವ ವೇಳೆ ಕಾರ್ಯಕರ್ತರು, ಅಭಿಮಾನಿಗಳಿಂದ ದಲಿತ ಪರ ಸಂಘಟನೆಗಳಿಂದ ಮುಂದಿನ ಸಿಎಂ
ಜಿ. ಪರಮೇಶ್ವರ ಎಂದು ಘೋಷಣೆ ಕೂಗಲಾಯಿತು. ಬಳಿಕ ಜೈಭೀಮ ಘೋಷಣೆ ಕೂಡಾ ಮೊಳಗಿತು.
Editor
Rudrappa B Asangi
Editor
Managing Editor
Chetan Asangi
Managing Editor


