ರಾಷ್ಟ್ರಧ್ವಜವು ದೇಶದ ವೈವಿಧ್ಯಮಯ ಸಂಸ್ಕೃತಿಯ ಪ್ರತೀಕ -ಚನ್ನಮಲ್ಲಿಕಾರ್ಜುನ ಶ್ರೀಗಳು

ಸಪ್ತಸಾಗರ ವಾರ್ತೆ,ವಿಜಯಪುರ, ಆ. 16: ರಾಷ್ಟ್ರಧ್ವಜವು ನಮ್ಮ ದೇಶದ ಗೌರವದ ಸಂಕೇತವಾಗಿದೆ. ಇದು ನಮ್ಮ ದೇಶದ ಶ್ರೀಮಂತ ಪರಂಪರೆ, ವೈವಿಧ್ಯಮಯ ಸಂಸ್ಕೃತಿ,ದೇಶದ ಪ್ರಗತಿ ಮತ್ತು ಏಕತೆಯನ್ನು ಪ್ರತಿನಿಧಿಸುತ್ತದೆ ಎಂದು ಮ ಘ ಚ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ನಾಗಠಾಣ ಗ್ರಾಮದ ಉದಯಲಿಂಗೇಶ್ವರ ಮಠದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡ ‘ರಾಷ್ಟ್ರಧ್ವಜದ ಮಹತ್ವ’ ಕುರಿತ ಚಿಂತನಗೋಷ್ಠಿಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ರಾಷ್ಟ್ರಧ್ವಜವು ಭಾರತದ ಸ್ವಾತಂತ್ರ್ಯ ಹೋರಾಟದ ಮೌಲ್ಯ-ತ್ಯಾಗಗಳನ್ನು ಎತ್ತಿಹಿಡಿಯುತ್ತದೆ. ಅದು ದೇಶದ ಇತಿಹಾಸ, ಸಂಸ್ಕೃತಿ, ಮತ್ತು ಜನರ ಭಾವನೆಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಉಪನ್ಯಾಸ ನೀಡಿ,
ಭಾರತದ ಹೆಗ್ಗುರುತಾಗಿರುವ ತ್ರಿವರ್ಣ ಧ್ವಜವು, ಭಾರತೀಯರ ಆತ್ಮಾಭಿಮಾನದ ಸಂಕೇತ.ತ್ರಿವರ್ಣ ಧ್ವಜದಲ್ಲಿ, ಕೇಸರಿ-ಧೈರ್ಯ, ಬಿಳಿ-ಶಾಂತಿ, ಹಸಿರು-ಸಮೃದ್ಧತೆ, ಮಧ್ಯದ ಚಕ್ರವು ಚಲನೆ-ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.
ಸ್ವಾತಂತ್ರ್ಯದ ಆದರ್ಶಗಳ ಪ್ರತಿಬಿಂಬವಾದ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಹೇಳಿದರು.
ವೇದಮೂರ್ತಿ ಮುರುಗೇಂದ್ರ ಶಾಸ್ತ್ರಿಗಳು ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಶರಣಬಸು ಪೂಜಾರಿ, ಗಾಯಕ ವಿರೂಪಾಕ್ಷಯ್ಯ ಗೌಡಗಾಂವ, ತಬಲಾ ವಾದಕ ಬಸವರಾಜ ಆಳಂದ, ಗ್ರಾಮಸ್ಥರಾದ ಅಶೋಕ ಕತ್ನಳ್ಳಿ, ರಾವುತಪ್ಪ ಬಿಜ್ಜರಗಿ, ಶಂಕರಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಬಾಬು ಕೋಲಾರ, ಸುರೇಶ ಕತ್ನಳ್ಳಿ, ಮಹಾದೇವ ಲೋಣಿ, ಮುತ್ತು ಕತ್ನಳ್ಳಿ, ಹಣಮಂತ ಬಕಾಟಿ ಸೇರಿದಂತೆ ಗ್ರಾಮದ ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

Share