ಸಪ್ತ ಸಾಗರ ವಾರ್ತೆ ವಿಜಯಪುರ, ಸೆ. 25:
ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂದು ಆಗ್ರಹಿಸಿ ಕಳೆದ ಎಂಟು ದಿನಗಳಿಂದ ಕೈಗೊಂಡ ಧರಣಿ ಸತ್ಯಾಗ್ರಹ ಗುರುವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.
ಏತನ್ಮಧ್ಯೆ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಆನಂದ್ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಸತ್ಯಾಗ್ರಹ ಹಿಂತೆಗೆದುಕೊಳ್ಳಲು ಮನವಿ ಮಾಡಲಾಯಿತು. ಆದರೆ ಹೋರಾಟಗಾರರು ವಿಜಯಪುರ ಜಿಲ್ಲೆಗೆ ಘೋಷಣೆ ಮಾಡಿದ ಪಿಪಿಪಿ ಮಾದರಿ ವೈದ್ಯಕೀಯ ಕಾಲೇಜು ಕೈಬಿಟ್ಟು ಸರ್ಕಾರಿ ವೈದ್ಯಕೀಯ ಕಾಲೇಜ್ ಘೋಷಣೆ ಮಾಡುವ ತನಕ ಹೋರಾಟ ಕೈ ಬಿಡುವುದಿಲ್ಲ ಎಂದು ಧರಣಿನಿರತರು ಸ್ಪಷ್ಟಪಡಿಸಿದರು.
ಆಗ ಜಿಲ್ಲಾಧಿಕಾರಿ ಡಾ. ಆನಂದ ಅವರು, ತಮ್ಮ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿ, ಸತ್ಯಾಗ್ರಹ ಸ್ಥಳದಿಂದ ನಿರ್ಗಮಿಸಿದರು.
ಇದಕ್ಕೂ ಪೂರ್ವದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರು ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ವಿಜಯಪುರ ಜಿಲ್ಲೆಯ ಸರಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ಎಕರೆ ಜಮೀನಿದ್ದು, ಇಲ್ಲಿ ಯಾಕೆ ವೈದ್ಯಕೀಯ ಕಾಲೇಜು ಬೇಡ ಎನ್ನುತ್ತಿದ್ದಾರೆನ್ನುವುದನ್ನು ನಾವು ನೀವು ಅರ್ಥ ಮಾಡಿಕೊಳ್ಳ ಬೇಕು. ಸದನದಲ್ಲೊಬ್ಬರು ಪಿಪಿಪಿ ತರವುದರಿಂದ ಒಳ್ಳೆಯದು ಆಗುತ್ತದೆ. ನಾವು ೫೦೦ ಕೋಟಿ ಹಾಕುತ್ತೇವೆ ಎಂದರು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು ಈಗಾಗಲೇ ದುಡ್ಡು ಮಾಡಿದ್ದ ರಾಜಕಾರಣಿಗಳು ಇದರಿಂದ ಇನ್ನಷ್ಟು ದುಡ್ಡು ಮಾಡಿಬೇಕೆಂದು ಬಯಸಿದ್ದಾರೆ. ಈಗಾಗಲೇ ಖಾಸಗಿ ಎರಡು ವೈದ್ಯಕೀಯ ಕಾಲೇಜುಗಳಿವೆ. ಆದರೆ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಿದರೆ ಇವರಿಗೇನು ತ್ರಾಸಿದೆ. ಇದು ಸಣ್ಣ ಮಕ್ಕಳಿಗೂ ಅರ್ಥವಾಗುವಂತಹದ್ದು. ಹಿಂದೆಯೇ ಕುಮಾರಸ್ವಾಮಿಯವರು ಬಂದು ವೈದ್ಯಕೀಯ ಕಾಲೇಜಿಗಾಗಿ ಸ್ಥಳ ವೀಕ್ಷಣೆ ಮಾಡಿದಾಗಲೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಈಗ ಖಾಸಗಿ ಆರೋಗ್ಯ ಸೇವೆಗಳು ತುಂಬಾ ದುಬಾರಿ ಯಾಗಿವೆ. ಜಿಲ್ಲೆಯ ಅಭಿವೃದ್ಧಿ ಯಾಗಬೇಕಾದರೆ ೪೦೦- ೫೦೦ ಕೋಟಿ ರೂಪಾಯಿಗಳು ದೊಡ್ಡದಲ್ಲ. ಅದನ್ನು ಸರಕಾರ ಕೊಡಬೇಕು. ಸರಕಾರಿ ಕಾಲೇಜು ಬರುವುದರಿಂದ ಕಡುಬಡವರಿಗೆ ಅನುಕೂಲವಾಗುತ್ತದೆ. ಆದರೆ ರಾಜಕಾರಣಿಗಳು ತಾವು ಬೆಳೆಯುವದು, ತಮ್ಮ ಶಿಕ್ಷಣ ಸಂಸ್ಥೆಗಳು ಬೆಳೆಯುವದನ್ನು ಮಾತ್ರ ನೋಡುತ್ತಿದ್ದಾರೆ ಎಂದು ಟೀಕಿಸಿದರು.
ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಡಾ. ಅಂಬೇಡ್ಕರ್ ವೃತ್ತದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹಕ್ಕೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ) ಮುಖಂಡರು ಬೆಂಬಲ ನೀಡಿದರು. ಜಿಲ್ಲಾ ಸಂಚಾಲಕರಾದ ಸಿದ್ದು ರಾಯಣ್ಣವರ, ಜಿಲ್ಲಾ ಸಂಘಟನಾ ಸಂಚಾಲಕ ವೈ.ಸಿ. ಮಯೂರ, ಪ್ರಶಾಂತ ಝಂಡೆ ನೇತೃತ್ವದಲ್ಲಿ ಧರಣಿ ಸ್ಥಳಕ್ಕೆ ಆಗಮಿಸಿದ ದಸಂಸ ಕಾರ್ಯರ್ತರು ಯಾವುದೇ ಕಾರಣಕ್ಕೂ ಸರಕಾರ ಖಾಸಗಿಯವರಿಗೆ ಸರಕಾರಿ ಮೆಡಿಕಲ್ ಕಾಲೇಜನ್ನು ವಹಿಸಬಾರದು ಎಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹಿಗಳನ್ನು ಉದ್ದೇಶಿಸಿ ಗಜಾನನ ಚೌಧರಿ, ರವಿಕಾಂತ ಬಗಲಿ, ಉಮೇಶ ವಂದಾಲ, ಪ್ರಕಾಶ ಮಿರ್ಜಿ, ರವೀಂದ್ರ ಲೋಣಿ, ರವಿ ಕುಲಕರ್ಣಿ, ರಾಜು ಬಿರಾದಾರ, ಬಾಬು ಚವ್ಹಾಣ, ಶಿವು ಭುಯ್ಯಾರ, ಮಲ್ಲು ಕುಂಬಾರ, ಸಂತೋಷ ಚವ್ಹಾಣ, ವಿನೋದ ಖೇಡ, ಬಿ. ಭಗವಾನರಡ್ಡಿ, ಎಚ್.ಬಿ. ಚಿಂಚೋಳಿ ಮಾತನಾಡಿದರು.
ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಸದಸ್ಯರುಗಳು ಬೆಂಬಲ ವ್ಯಕ್ತಪಡಿಸಿದರು. ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ರಂಗಪ್ಪ ದಾಸರ , ಉಪಾಧ್ಯಕ್ಷರಾದ ಹಣಮಂತ ಸದಸ್ಯರುಗಳಾದ ಜಗದೀಶ, ಉಮರಾಣ, ರಾಜು ಕುಮಟಗಿ, ಅಶೋಕ ವಾಲಿಕಾರ, ಅಂಬಣ್ಣ ಬುರಾಣಪುರ, ಮಲ್ಲಿಕಾರ್ಜುನ ಮುಂತಾದವರು ಆಗಮಿಸಿದ್ಧರು.
ವಿಜಯಪುರ ನಗರ ಗೃಹಕಾರ್ಮಿಕರ ಯುನಿಯನ್‌ದ ವಿಜಯಪುರ ಸದಸ್ಯರು ಬೆಂಬಲಿಸಿಮಾತನಾಡಿದರು. ಅದ್ಯಕ್ಷರು ಫರ್ಜಾನಾ ಜಮಾದಾರ, ಸದಸ್ಯರಾದ ಶಾಬೀರಾ ಗಲಗಲಿ,ಶಮೀನ ಬಾನು ಜಹಾಗಿರದಾರ, ಜನ್ನತಬೀ ಮುಳವಾಡ, ಸಫಿಹಾ ಶೇಖ್, ಮಾಲನ್ ಗೋರಾಡೆ ಅಲ್ಲಬೀ ಕರ್ಜಗಿ, ಶಬಾನಾ ಕನ್ನೂರ, ಆಸ್ಮಾ ವಾಲೀಕಾರ ಇದ್ದರು.
ಅಕ್ರಮ ಮಾಶ್ಯಾಳಕರ, ಫಯಾಜ್ ಕಲಾದಗಿ, ಭರತಕುಮಾರ ಎಚ್ ಟಿ, ಪ್ರಕಾಶ ಸಬರದ, ಮಲ್ಲಿಕಾರ್ಜುನ್ ಎಚ್ ಟಿ. ಭೋಗೇಶ ಸೋಲಾಪುರ, ಕಿರಣ ಮೇಲಿಕೆರಿ, ಅನೀಲ ಹೊಸಮನಿ, ಪ್ರಭುಗೌಡ ಪಾಟೀಲ, ಸಂಗಪ್ಪ ಕಟಾರಿ, ಶೋಭಾ ವಾಲಿಕಾರ, ಬಾಬು ಬೀರಕಟ್ಟಿ, ಶ್ರೀನಾಥ ಪೂಜಾರಿ, ರೇಣುಕಾ ಕೋಟ್ಯಾಳ ಕಾಮಿನಿ ಕಸಭ, ನಕುಶಾ ಹೊಸಮನಿ, ವಿದ್ಯಾವತಿ ಅಂಕಲಗಿ, ಲಲಿತಾ ಬಿಜ್ಜರಗಿ, ಎಸ್ ಜಿ ಸಮಗೊಲ್ಲಿ, ಬಿ ಬಿ ಕಟಗೆರಿ, ಸಿ ಎಸ್ ಬಿರಾದಾರ, ಗೀತಾ ಕಟ್ಟಿ, ಅಹಮದ್ ಜಮಾದಾರ, ಎಸ್ ಎಸ್ ಬಣಜಿಗೇರ, ಸುರೇಶ ಬಿಜಾಪುರ, ಸಿದ್ರಾಮಯ್ಯ ಎಚ್, ಎಮ್ ಆರ್ ಸೌದಾಗರ, ಎಚ್ ಎಸ್ ಮಮದಾಪುರ, ಸುನಂದಾ ರಾಠೊಡ, ರಾಜು ಬಿರಾದಾರ, ಉಮೇಶ ವಂದಾಲ, ರೆಷ್ಮಾ ಕಟ್ಟಿಮನಿ, ಸುನೀತಾ ಮೊರೆ, ಎಮ್ ಎಸ್ ಕುಂಬಾರ, ಸಂಜು ಶಟಗಾರ, ಅದೃಶ್ಯಪ್ಪ ವಾಲಿ, ಆರೀಶ್ ಕಲಗಟಗಿ, ಲಕ್ಷö್ಮಣ ಕಂಬಾಗಿ, ಶಂಕರಗೌಡ ಪಾತೀಲ, ಸುರೇಶ ಜೆ ಬಿ, ನೀಲಂಬಿಕಾ ಬಿರಾದಾರ, ಮಾಲನ್ ಗುವಾಡೆ, ದಸ್ತಗಿರ ಉಕ್ಕಲಿ, ಅಬ್ಬಣ್ಣ ಗುನ್ನಾಪುರ,್ಣಅನೀಲ ಪವಾರ, ಜಗದೇವ ಸೂರ್ಯವಂಶಿ, ಸುರೇಶ ನಿನ್ನೆ, ಶಿವಬಾಳಮ್ಮ ಕೊಂಡಗೂಳಿ, ಜಬಿನಾ, ಮುಂತಾದವರು ಭಾಗವಹಿಸಿದ್ದರು.
ಸರ್ಕಾರಿ ವೈದ್ಯಕೀಯ ಕಾಲೇಜ್ ಗೆ ಆಗ್ರಹಿಸಿ 8ನೇ ದಿನದಲ್ಲಿ ಮುಂದುವರೆದ ಧರಣಿ ಸತ್ಯಾಗ್ರಹ
