ಸಪ್ತಸಾಗರ ವಾರ್ತೆ,ವಿಜಯಪುರ, ಆ.25:
ನಗರದ ಪ್ರಸಿದ್ಧ ಕಾಮಿತಾರ್ಥಪ್ರದ ಶ್ರೀನಿವಾಸ ದೇವಸ್ಥಾನದ ಆವರಣದಲ್ಲಿ ನಡೆಯುವ ಭವ್ಯ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ಮತ್ತು ಮನೆ ಮನೆಗೂ ಶ್ರೀನಿವಾಸ ಕಾರ್ಯಕ್ರಮಕ್ಕೆ ಗುರುಗಳು ಚಾಲನೆ ನೀಡಿದರು.
ಶ್ರೀಪಂ. ಸಂಜೀವ ಆಚಾರ ಮಧಬಾವಿ ಅವರ ನೇತೃತ್ವದಲ್ಲಿ ಮತ್ತು ಸಂಜೀವ ದೇಸಾಯಿ ಅವರ ಮಾರ್ಗದರ್ಶನದಿಂದ ಕಾರ್ಯಕ್ರಮ ಜರುಗುವುದು.
ಗುರುಗಳ ಮಂತ್ರಾಕ್ಷತೆ ಅನುಗ್ರಹದಿಂದ ಬರುವ ಗುರುವಾರದಿಂದ ಕಾರ್ಯಕ್ರಮ ನಡೆಯುತ್ತಿದೆ. ಭಾಗ್ಯನಗರಕೆ ನಮ್ಮ ತಂಡದವರು ಆಗಮಿಸಿದ್ದರು. ಸಂಚಾಲಕ ಸಂಜೀವ ದೇಸಾಯಿ ಹಾಗೂ ಸದ್ಯಸರಾದ ಕೃಷ್ಣಾಜೀ ಕುಲಕರ್ಣಿ, ಗೋವಿಂದರಾಜ ದೇಶಪಾಂಡೆ, ಆನಂದ ಕುಲಕರ್ಣಿ, ಗುರುರಾಜ ಜೋಶಿ, ಮಧು ದೇಸಾಯಿ, ಸುರೇಂದ್ರ, ಸುಧೀಂದ್ರ ಕುಲಕರ್ಣಿ, ರಾಧಾ ಕುಲಕರ್ಣಿ, ಕೀರ್ತಿ ಕುಲಕರ್ಣಿ, ಗೀತಾ ಜಹಾಗೀರದಾರ, ವಂದನಾ ನಾಯಕ ಮತ್ತಿತರರು ಇದ್ದರು.
ಮನೆ ಮನೆಗೂ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮಕ್ಕೆ ಚಾಲನೆ
