ಶರಣರ ವಚನಗಳಲ್ಲಿ ಹೃದಯತುಂಬಿದ ಅನುಭಾವ: ರೆಡ್ಡಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 19:
ಶರಣರು ತಮ್ಮ ವಚನಗಳ ಮೂಲಕ ಸತ್ಯ, ನಿಷ್ಠೆ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರು, ಅದರಲ್ಲಿ ಕಾಯಕ, ದಾಸೋಹ ಪೂಜೆಯಾಗಬೇಕು. ಶರಣರ ವಚನಗಳಲ್ಲಿ ಹೃದಯ ತುಂಬಿದ ಅನುಭಾವ ಎಂದು ಉಪನ್ಯಾಸಕ ಸಂಗನಬಸಪ್ಪ ರೆಡ್ಡಿ
ಹೇಳಿದರು.
ನಗರದ ಅ.ಭಾ.ವಿ. ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಲಿಂಗಾಯತ ಸಭಾಭವನದಲ್ಲಿ ಏರ್ಪಡಿಸಿದ 77ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಸಕಲೇಶ ಮಾದರಸ ಅವರ ಅನುಭಾವ ಕುರಿತು ಮಾತನಾಡಿದರು.
ರಾಜ ಪರಿವಾರದ ಸಕಲೇಶರು ಸಂಸಾರವನ್ನು
ತ್ಯಾಗಮಾಡಿ ಸದ್ಗುರುವನ್ನು ಕಾಣಲು ಶ್ರೀಶೈಲಕ್ಕೆ ಹೋಗುತ್ತಾರೆ. ಶಿವನ ಸನ್ನಿಧಿಯಲ್ಲಿ ಕುಳಿತು ಧ್ಯಾನಸಕ್ತರಾಗಿ ತ್ರಿಕಾಲ ಪೂಜಾ ನಿಷ್ಟರಾಗಿ ಶಿವನನ್ನು ಒಲಿಸಿಕೊಂಡವರು. ಸಕಲೇಶರ ವಚನಗಳಲ್ಲಿ ಭಕ್ತಿ ನಿಷ್ಠೆ, ಜ್ಞಾನ ನಿಷ್ಠೆ, ಕಾಯಕ ಜೊತೆಗೆ ಗುರುಭಕ್ತಿ ಮಾಡುತ್ತ ಶಿವನ ಆಜ್ಞೆಯಂತೆ ಕಲ್ಯಾಣಕ್ಕೆ ಬಂದು ಅನುಭವ ಮಂಟಪದಲ್ಲಿ
ರಾಗ ಸಂಯೋಜನೆಯೊಂದಿಗೆ ವಚನಗಳನ್ನು ಹಾಡಿದವರು.
ಅವರ ವಚನಗಳಲ್ಲಿ ದುಃಖ ದುಮ್ಮಾನ, ಜನರ ಭಾವನೆಯನ್ನು ಪ್ರಶ್ನಿಸುವ ಆಸೆಬೇಕು, ನಿರಾಸೆ ಭಾವವಿರಬಾರದು. ದುರಾಸೆ ಇರಬಾರದು. ಒಳ್ಳೆಯ ವಿಚಾರವಿರಬೇಕು. ದೈವರೂಪದಲ್ಲಿರಬೇಕು ಎಂದು ತಿಳಿಸುತ್ತಾ ಅವರು ರಚಿಸಿದ 133 ವಚನಗಳು ಲಭ್ಯವಾಗಿವೆ ಅವೆಲ್ಲವೂ
ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವಲ್ಲಿ ಸರ್ವಶ್ರೇಷ್ಠವಾಗಿವೆ ಎಂದರು.
ಮಹಾಸಭೆಯ ನಿರ್ದೇಶಕ ಗಂಗಾಧರ ಸಾಲಕ್ಕಿ ಮಾತನಾಡಿ,ಸಕಲೇಶರು ವೈರಾಗ್ಯದಿಂದ ಹೊರಬಂದು ಅನುಭಾವ ಮಂಟಪದ ಶಕ್ತಿಯಾಗಿ ವಚನ ರಚಿಸಿ ರಾಗ ಸಂಯೋಜನೆ ಮಾಡಿದ್ದಾರೆ. ಆ ವಚನಗಳ ಸಂಶೋಧನೆ, ರಕ್ಷಣೆ ಕಾರ್ಯವಾಗಬೇಕಾಗಿದೆ ಎಂದರು.
ಮಹಾಸಭೆಯ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ 12ನೇ
ಶತಮಾನದಲ್ಲಿ ಆಗಿ ಹೋದಂತಹ ಕ್ರಾಂತಿಯ ಕೇಂದ್ರ ಸಕಲೇಶರು, ಶರಣರು ಶತಮಾನದ ದೇವ ಮಾನವರು ತಮ್ಮ ಕಾರ್ಯದಲ್ಲಿ ಮಗ್ನರಾಗಿ ಅಂತರಂಗ ಶುದ್ಧಿ
ಮಾಡಿಕೊಂಡು ಶ್ರಮಜೀವಿಗಳಾಗಿ ಸನ್ಮಾರ್ಗವನ್ನು ಕಂಡುಕೊಂಡರು. ಶಿವಪೂಜೆ ನಿಷ್ಠರಾಗಿ ಬದುಕನ್ನು ಕಟ್ಟಿಕೊಂಡವರು ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಬಿ.ಎಂ. ಪಾಟೀಲ ವಚನಗೀತೆ ಪ್ರಸ್ತುತ ಪಡಿಸಿದರು. ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಡಾ. ಸಂಗಮೇಶ ಮೇತ್ರಿ
ವಂದಿಸಿದರು. ಸಾಹಿತಿ ಸಂಗಮೇಶ ಬದಾಮಿ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸುಭಾಸ ಬೇಟಗೇರಿ, ಭೀಮಣ್ಣ ಭಜಂತ್ರಿ, ದೊಡ್ಡಣ್ಣ ಭಜಂತ್ರಿ, ಎಂ.ವಾಯ್. ಜಾವಡಗಿ, ಎ.ಐ. ಪಟ್ಟಣಶೆಟ್ಟಿ, ಸಹದೇವ ನಾಡಗೌಡರ ಜಗದೀಶ ಮೋಟಗಿ, ಎಲ್.ಪಿ. ಬಿರಾದಾರ, ಶರಣಗೌಡ ಪಾಟೀಲ ಹಾಗೂ ಶರಣರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this