ಪ್ರಜಾಪ್ರಭುತ್ವ ಇಲ್ಲ ಎಂಬುವುದು ಉಪ ರಾಷ್ಟ್ರಪತಿಗೆ ಈಗ ಅರ್ಥವಾಗಿದೆ- ಸಚಿವ ಲಾಡ್

ಸಪ್ತಸಾಗರ ವಾರ್ತೆ,ವಿಜಯಪುರ,ಜು. 23:
ಪ್ರಜಾಪ್ರಭುತ್ವ ಇಲ್ಲ ಎಂಬುವುದು ಉಪರಾಷ್ಟ್ರಪತಿ ಜಗದೀಪ ಧನಕರ್ ಅವರಿಗೆ ಈಗ ಗೊತ್ತಾಗಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ದೇಶದಲ್ಲಿ
ಪ್ರಜಾಪ್ರಭುತ್ವ ಇಲ್ಲ ಎಂದು
ಉಪರಾಷ್ಟ್ರಪತಿಗಳಿಗೆ ಅದು ಈಗ ಅರ್ಥವಾಗಿದೆ ಎಂದರು.
ಈ ದೇಶದ ವ್ಯವಸ್ಥೆಯಲ್ಲಿ ಯಾಕೆ ರಾಜೀನಾಮೆ ಕೊಡಿಸಿದರು.
ಅವರಿಗೆ ಒತ್ತಡ ಯಾಕೆ ಬಂದಿದೆ.
ಸ್ವ ಇಚ್ಛೆಯಿಂದ ಯಾಕೆ ರಾಜೀನಾಮೆ ಕೊಟ್ಟರು ಎಂದು ಬಿಜೆಪಿಯವರನ್ನು ಕೇಳಬೇಕು ಎಂದರು.
ಧರ್ಮಸ್ಥಳ ಸರಣಿ ಕೊಲೆ ಆರೋಪ ಕುರಿತು ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅದಕ್ಕಾಗಿ ಧರ್ಮಸ್ಥಳ ಶಾಪದಿಂದ ಸರ್ಕಾರ ಪತನವಾಗುತ್ತದೆ ಎಂದು ಜನಾರ್ಧನ ರೆಡ್ಡಿ ಹೇಳಿಕೆಗೆ ಸಚಿವ ಲಾಡ್ ಪ್ರತಿಕ್ರಿಯೆ ನೀಡಲಿಲ್ಲ.
ಧರ್ಮಸ್ಥಳದಲ್ಲಿ ಸರಣಿ ಕೊಲೆ ಆರೋಪ ಎಸ್ಐಟಿ ತನಿಖೆಯಲ್ಲಿ ಸೌಜನ್ಯಾ ಕೊಲೆ ಕೇಸ್ ಇಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ, ಯಾವ ಕೇಸ್ ಬಿಡುವ ಪ್ರಶ್ನೆಯೇ ಇಲ್ಲ. ಸಿಎಂ ಸಿದ್ದರಾಮಯ್ಯ, ಹೋಂ ಮಿನಿಸ್ಟರ್ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ. ನಾವು ಯಾವುದೇ ಅಪರಾಧಿಗೆ ಬೆಂಬಲ ನೀಡುವುದಿಲ್ಲ. ಯಾರೇ? ಎಷ್ಟೇ? ಪ್ರಭಾವಿ ಅಪರಾಧಿಯಾಗಿದ್ದರೂ ಅವರ ಮೇಲೆ ಕಾನೂನು ಕ್ರಮ ಗ್ಯಾರಂಟಿ ಎಂದು ಸಚಿವ ಲಾಡ್ ಹೇಳಿದರು.
ಅಸಂಘಟಿತ ವಲಯಕ್ಕೆ ಸೇರುವ ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಕಾರ್ಮಿಕ ಇಲಾಖೆಯಿಂದ ಅನಕೂಲ ಮಾಡುತ್ತೇವೆ. ಈ ನಿಟ್ಟಿನಲ್ಲಿ ಸರ್ಕಾರದಿಂದ ಬಿಲ್ ಪಾಸ್ ಮಾಡಿ ತರುತ್ತೇವೆಂದು ನುಡಿದರು.
ಸಿಗಂಧೂರ ದೇವಸ್ಥಾನ ಹೇಗೆ ಹಾಳು ಮಾಡುತ್ತಾರೆಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಕೆಲ ಸಚಿವರು ಸಿಎಂ ಆಗಬೇಕೆಂಬ ವಿಚಾರದ ಬಗ್ಗೆ ಸ್ವಾಮಿಜಿಗಳಿಂದ ಹೇಳಿಕೆ ವಿಚಾರವಾಗಿ, ಇದೆಲ್ಲ ಹಳೆಯ ಸುದ್ದಿಯಾಗಿದೆ. ಯಾರಾದರೂ ಮಾತನಾಡಲಿ. ನಾನು ಈ ನಿಟ್ಟಿನಲ್ಲಿ ಮಾತನಾಡಲ್ಲ. ಹೈಕಮಾಂಡ್ ನಿರ್ದೇಶನದಂತೆ ನಾನು ಮೊದಲು ಮಾತನಾಡಿಲ್ಲ. ಮುಂದೆಯೂ ಮಾತನಾಡಲ್ಲ ಎಂದರು.
ಕಾರ್ಮಿಕರಲ್ಲದವರಿಗೆ ಕಾರ್ಮಿಕ ಕಾರ್ಡ್ ನೀಡಲಾಗಿದೆ ಎಂಬ ವಿಚಾರ ಕುರಿತು,
ಈ ನಿಟ್ಟಿನಲ್ಲಿ ಈಗಾಗಲೇ ನಾವು ಕ್ರಮ ತೆಗೆದುಕೊಂಡಿದ್ದೇವೆ. 56 ಲಕ್ಷ ಕಾರ್ಡ್ ಗಳಲ್ಲಿ 20 ಲಕ್ಷ ಕಾರ್ಡ್ ರದ್ದುಪಡಿಸಿದ್ದೇವೆ.
36 ಲಕ್ಷ ಜನರಿಗೆ ಕಾರ್ಮಿಕ ಕಾರ್ಡ್ ನೀಡಿದ್ದೇವೆ. ಅವರು ನಿಜವಾದ ಕಾರ್ಮಿಕರು ಇದ್ದಾರೆ ಇಲ್ಲವೋ ಎಂಬುದು ತಿಳಿದುಕೊಂಡು ಕಾರ್ಡ್ ನೀಡಲಾಗುತ್ತದೆ ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ, ಸಿಎಂ ಸಿದ್ದರಾಮಯ್ಯ ಮಧ್ಯೆಶೀತಲ ಸಮರ ವಿಚಾರವಾಗಿ ಪ್ರತಿಕ್ರಿಯೆ ನೀಡಿ , ಬೋರ್ಡ್, ಕಾರ್ಪೋರೇಷನ್ ಹಾಗೂ ಎಂ.ಎಲ್. ಸಿ ವಿಚಾರಕ್ಕೆ ಸಿಎಂ ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದರು.

Share this