ಬೆಳೆ ಹಾನಿ ಕುರಿತು ಒಂದು ವಾರದಲ್ಲಿ ರೈತರಿಗೆ ಪರಿಹಾರ ನೀಡದಿದ್ದರೆ ಉಗ್ರ ಹೋರಾಟ: ನಡಹಳ್ಳಿ ಎಚ್ಚರಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 19:
ರಾಜ್ಯದಲ್ಲಿ ಭಾರೀ ಮಳೆಯಿಂದ ರೈತರ ಬೆಳೆಗಳು ಹಾಳಾಗಿವೆ. ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವರು ಇತ್ತ ಗಮನ ಹರಿಸುತ್ತಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಆರೋಪಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಸಿಎಂ ಹಾಗೂ ಸಚಿವರ ನಡೆ ಖಂಡನೀಯ. ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
2019 ರಲ್ಲಿ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದಾಗ ತುರ್ತಾಗಿ ಪರಿಹಾರ ನೀಡಿದ್ದರು.
ಆಗ ಯಡಿಯೂರಪ್ಪ ಒಂಟಿಯಾಗಿ 14 ಜಿಲ್ಲೆಗಳ ಪ್ರವಾಹ ಕುರಿತು ಪ್ರವಾಸ ಮಾಡಿದ್ದರು. ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ನಿಯಮಗಳ ಆಚೆ 10 ಸಾವಿರ ಹಣ ಹೆಕ್ಟೇರ್ ಗೆ ನೀಡಿದ್ದರು.
ರಾಜ್ಯದಲ್ಲಿ 20,000 ಕೋಟಿ ಹಣವನ್ನು ರಾಜ್ಯದಿಂದಲೇ ಯಡಿಯೂರಪ್ಪ ನೀಡಿದ್ದರು ಎಂದರು.
ಈಗ ರಾಜ್ಯ ಸರ್ಕಾರ ಪ್ರತಿ ಹೆಕ್ಟೇರ್ ಗೆ 25000 ಹಣ ಪರಿಹಾರ ನೀಡಬೇಕು.
ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ನಿಯಮಗಳ ಆಚೆ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು.
ಒಂದು ವಾರದಲ್ಲಿ ಸರ್ಕಾರ ರೈತರಿಗೆ ಪರಿಹಾರ ನೀಡದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತದೆ.
ಸದ್ಯ ಉತ್ತರ ಕರ್ನಾಟಕ ಭಾಗದಲ್ಲಿ ಕಟಾವಿಗೆ ಬಂದ ಬೆಳೆಗಳು ಮಳೆಯಿಂದ ಹಾಳಾಗಿವೆ. ಹಾಳಾದ ಬೆಳೆಗಳಿಗೆ ಸೂಕ್ತ ಪರಿಹಾರ ಸಿಗಲೇಬೇಕು ಎಂದು ಆಗ್ರಹಿಸಿದರು.
ರಾಜ್ಯ ಬಿಜೆಪಿ ರೈತ ಮೋರ್ಚಾ ನಿರೀಕ್ಷಿತ ಹೋರಾಟ ಮಾಡುತ್ತಿಲ್ಲ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲೇ ಅತೀ ಹೆಚ್ಚು ಹೋರಾಟಗಳನ್ನು ರೈತ ಮೋರ್ಚಾ ಮಾಡಿದೆ. ಪ್ರತಿ ಹಂತದಲ್ಲೂ ರೈತರ ಪರವಾದ ಹೋರಾಟ ಮಾಡಿದ್ದೇವೆ.
ರಾಜ್ಯದಲ್ಲಿ ರಸಗೊಬ್ಬರ ಕೊರತೆ ಹಾಗೂ ವಕ್ಪ್ ವಿಚಾರದಲ್ಲಿ ಬಿಜೆಪಿ ರೈತ ಮೋರ್ಚಾ ಹೋರಾಟ ಮಾಡಿದೆ.
ರಸಗೊಬ್ಬರ ಕೊರತೆ ವಿಚಾರದಲ್ಲಿ ಮಾತನಾಡಿ, ಮೊದಲು ರಸಗೊಬ್ಬರ ಸಂಗ್ರಹ ತೋರಿಸುತ್ತಾರೆ.
ಈ ಭಾಗದಲ್ಲಿ ಮಳೆ ಕೊರತೆ ಕಾರಣ ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿರುತ್ತಾರೆ ಎಂದು ಆರೋಪಿಸಿದರು.
ಈ ಬಾರಿ ಉತ್ತಮ ಮಳೆಯಾದ ಕಾರಣ ರಸಗೊಬ್ಬರ ಬೇಡಿಕೆ ಹೆಚ್ಚಿದೆ.
ಇದಕ್ಕೆ ಕಾರಣ ವ್ಯಾಪಾರಸ್ಥರು ಕಳ್ಳ ಸಂತೆಯಲ್ಲಿ ಗೊಬ್ಬರ ಮಾರಾಟ ಮಾಡಿದ್ದೇ ಕಾರಣವಾಗಿದೆ ಎಂದರು.

Share