ಸಪ್ತಸಾಗರ ವಾರ್ತೆ, ವಿಜಯಪುರ, ಜ. 15: ಕಾಗಿನೆಲೆ ಮಹಾ ಸಂಸ್ಥಾನ ,ಕನಕ ಗುರು ಪೀಠ ಶಾಖಾಮಠ ತಿಂತಣಿ ಬ್ರಿಡ್ಜ್ ಗುಲ್ಬರ್ಗ ವಿಭಾಗೀಯ ಪೀಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳು ತೀವ್ರ ಹೃದಯಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ವಿಜಯಪುರ ನಗರದ ಅವರ ಅಪಾರ ಭಕ್ತರು ತುರ್ತಾಗಿ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಸೇರಿ ಶ್ರದ್ಧಾಂಜಲಿ ಸಭೆ ನಡೆಸಿದರು.
ಸಭೆಯಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ಚಂದ್ರಕಾಂತ ಬಿಜ್ಜರಗಿ ,ರವಿ ಕಿತ್ತೂರ, ಮಲ್ಲು ಬಿದರಿ, ಬೀರಪ್ಪ ಜುಮನಾಳ, ಅನಿಲ್ ಇಕ್ಕಡೆ, ಮೋಹನ ದಳವಾಯಿ, ಸುನಿಲ್ ತೋಂಟಾಪುರ, ಮೋಹನ ಮೇಟಿ, ಸತೀಶ ಅಡವಿ , ಬಸು ಕಂಕಣವಾಡಿ , ಸಿದ್ದು ಪೂಜಾರಿ ,ಸಂಗಮೇಶ ಕವಡಿಮಟ್ಟಿ, ರಾಜು ಕಗ್ಗೋಡ, ಮಾಳಿಂಗರಾಯ ಪೂಜೆರಿ ನಾಗಠಾಣ, ಚಂದ್ರಶೇಖರ ತೋಳಮಟ್ಟಿ , ಮಾಳಪ್ಪ ಹಲಕನ್ನವರ, ಅಮೋಘಿ ಬೂದಿಹಾಳ ಇನ್ನೂ ಅನೇಕರು ಭಾಗವಹಿಸಿ ಮಾತನಾಡಿ ,ಪೂಜ್ಯರು ಕುರುಬ ಸಮಾಜಕ್ಕೆ ಮಾತ್ರವಲ್ಲದೆ ಶೋಷಿತ ವರ್ಗಗಳ ಧ್ವನಿಯಾಗಿ ತಮ್ಮ ಸರಳತೆ ಮತ್ತು ಸಾಮಾಜಿಕ ಕಳಕಳಿಯ ಮೂಲಕ ಅಸಂಖ್ಯಾತ ಭಕ್ತರ ಹೃದಯದಲ್ಲಿ ಸ್ಥಾನ ಪಡೆದಿದ್ದರು ಎಂದು ಗುಣಗಾನ ಮಾಡಿದರು.
ಶ್ರೀ ಸಿದ್ದರಾಮಾನಂದ ಮಹಾಸ್ವಾಮಿಗಳ ನಿಧನಕ್ಕೆ ಕುರುಬ ಸಮಾಜ ಮುಖಂಡರ ಶ್ರದ್ಧಾಂಜಲಿ


