ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 12:
ಇಲ್ಲಿನ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಕಛೇರಿಯಲ್ಲಿ ದಲಿತ ಕವಿ,ಬಂಡಾಯ ಕವಿ ನಾಡೋಜ ಪ್ರಶಸ್ತಿ ಪಡೆದ ಬಡವರ ನಗುವಿನ ಶಕ್ತಿ, ಮಾನಸ ಪುತ್ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿದ್ದಲಿಂಗಯ್ಯನವರ ನುಡಿ ನಮನ ಕಾರ್ಯಕ್ರಮ ಗುರುವಾರ ಆಯೋಜಿಸಲಾಗಿತ್ತು.
ಸಿದ್ಧಲಿಂಗಯ್ಯನವರ 5ನೇ ಪುಣ್ಯ ತಿಥಿ ದಿನದ ನಿಮಿತ್ತ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿಕವಿ ಸಿದ್ದಲಿಂಗಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪುಣ್ಯತಿಥಿ ಆಚರಿಸಲಾಯಿತು.
ಜಿಲ್ಲಾ ಅಧ್ಯಕ್ಷ ಬಿ.ಎಚ್. ನಾಡಗಿರಿ ಅವರು ಮಾತನಾಡಿ, ಕನ್ನಡ ಸಾಹಿತ್ಯ ಲೋಕದಲ್ಲಿ ಕವಿ ಸಿದ್ದಲಿಂಗಯ್ಯನವರು ಆಳವಾದ ವಿಮರ್ಶಾತ್ಮಕ ವಿಚಾರಗಳನ್ನು ಹಾಗೂ ಅವರ ಸಂಘಟನಾ ಶಕ್ತಿಯನ್ನು ಸ್ಮರಿಸಿದರು. ದಲಿತರ ಕುರಿತು ಅಪಾರವಾದ ವಿಚಾರಗಳನ್ನು ಅವರ ಕವನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು. ಅವರ ನೋವುಗಳನ್ನು ಬರವಣಿಗೆ ಮೂಲಕ ಸಾಹಿತ್ಯವನ್ನು ರಚಿಸಿದರು ಎಂದರು.
ಜಿಲ್ಲಾ ಗೌರವಾಧ್ಯಕ್ಷ ಬಸವಂತ ಗುಣದಾಳ ಮಾತನಾಡಿ, ಡಾ. ಸಿದ್ದಲಿಂಗಯ್ಯನವರು ಸಮಾಜದ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ್ದರು. ಅವರು ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಅಗಲಿದ್ದಾರೆ.
ಪ್ರಧಾನ ಕಾರ್ಯದರ್ಶಿ ಡಾ. ಸೂರ್ಯಕಾಂತ ಹೊಸಮನಿ ಮಾತನಾಡಿ, ಡಾ. ಸಿದ್ದಲಿಂಗಯ್ಯನವರು ದಲಿತಪರ ಸಾಮಾಜಿಕ ಕಳಕಳಿಯ ಹೊಂದಿದ ಚಿಂತಕರು. ಅವರು ಶೋಷಿತ ನೌಕರರ ಬಗ್ಗೆ ಅಪಾರ ಗೌರವ ಕಾಳಜಿ ಉಳ್ಳವರಾಗಿದ್ದರು ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ಮುದ್ದಣ್ಣ ಭೀಮನಗರ, ಉಪಾಧ್ಯಕ್ಷ ರವಿ ಯಲಡಗಿ, ಎಸ್.ಎಮ್. ಡೋಣಿ, ಸಹ ಕಾರ್ಯದರ್ಶಿ ವಿಜಯಕುಮಾರ ಮುದ್ದೇಬಿಹಾಳ, ಸಂಘಟನಾ ಕಾರ್ಯದರ್ಶಿ ನಿಜು ಮೇಲಿನಕೇರಿ ಮತ್ತಿತರರು ಇದ್ದರು.
ಜಿಲ್ಲಾ ಕೋಶಾಧ್ಯಕ್ಷ ಮಹೇಶ ಹೊನ್ನಾಕಟ್ಟಿ ಸ್ವಾಗತಿಸಿದರು. ಜಿ.ಎಮ್ ಚಲವಾದಿ ವಂದಿಸಿದರು.
ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ನುಡಿ ನಮನ ಕಾರ್ಯಕ್ರಮ


