ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 2:
ಒಂದು ರಾಷ್ಟ್ರದ ಆಧ್ಯಕ್ಷನ ಹತ್ಯೆ ಮಾಡುವುದು, ಅವರನ್ನು ಕರೆದೊಯ್ದಿದ್ದು ಸರಿಯಲ್ಲ. ಅಮೆರಿಕ ಆದ್ಯಕ್ಷ ಟ್ರಂಪ್ ಮಾಡುವುದು ಸರಿಯಲ್ಲ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ಖಮನೈ ಹತ್ಯೆಗೆ ಭಾರತದಲ್ಲಿ ಪ್ರತಿಭಟನೆ ಮಾಡಿದ್ದರ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಒಬ್ಬರ ಸ್ವಾಯತ್ತತೆಯಲ್ಲಿ ಕೈಹಾಕುವುದು ಸರಿಯಲ್ಲ. ಇದು ಸರಿಯಾದ ಧೋರಣೆ ಅಲ್ಲ. ಇದಕ್ಕೆ ಬೆಂಬಲಿಸಿದರೆ ನಮಗೂ ಹೀಗೆ ಆಗುತ್ತದೆ ಎಂದರು.
ಜಾಗತಿಕ ನಾಯಕರ ಜೊತೆಗೆ ಚರ್ಚೆ ಮಾಡಿ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಮನಸ್ಸಿಗೆ ಬಂದಂತೆ ಮಾಡುವುದು ಸರಿಯಲ್ಲ ಎಂದರು.
ಸಿಯಾ ಜನ ಖಮನೈಯನ್ನು ರಿಲೀಜಿಯಸ್ ನಾಯಕನೆಂದು ನಂಬಿದ್ದರು ಎಂದು ತಿಳಿಸಿದರು.
ಟ್ರಂಪ್ ಧೋರಣೆ ಸರಿಯಲ್ಲ: ಸಚಿವ ಎಂ. ಬಿ. ಪಾಟೀಲ


