ಸಪ್ತಸಾಗರ ವಾರ್ತೆ, ವಿಜಯಪುರ, ಆ. 22:
ಭಾರಿ ಗಾತ್ರದ ಉಡಾವೊಂದು ಮನೆಗೆ ನುಗ್ಗಿದ್ದರಿಂದ ಮನೆಯವರು ಆತಂಕಕ್ಕೀಡಾದ ಘಟನೆ ನಗರದ ಕೀರ್ತಿ ಬಡಾವಣೆಯಲ್ಲಿ ಶುಕ್ರವಾರ ನಡೆದಿದೆ.
ಕೀರ್ತಿ ನಗರದ ನಿವಾಸಿ ಆರ್.ಎಂ. ಬಿರಾದಾರ ಎಂಬುವರ ಮನೆಯ ಶೌಚಾಲಯಕ್ಕೆ ಭಾರಿ ಗಾತ್ರದ ಉಡಾ ನುಳಿಸಿದ್ದರಿಂದ ಮನೆಯವರು ಗಾಬರಿಯಿಃದ ಆತಂಕಗೊಂಡರು.
ಮೊಸಳೆ ಆಕಾರದ ಸರಿಸೃಪವನ್ನು ಉಡಾ ಎಂದು ಕರೆಯುತ್ತಾರೆ.
ನಗರದಲ್ಲಿ ಇತ್ತೀಚೆಗೆ ಸುರಿದಿದ್ದ ಸತತ ಮಳೆಯಿಂದ ಉಡಾ ಬಿಲದಿಂದ ಹೊರ ಬರುತ್ತಿವೆ.
ಸರಿಸೃಪ ಪ್ರಾಣಿಗಳು ಬಿಸಿ ಪ್ರದೇಶಗಳಿಗೆ ವಲಸೆಗೊಂಡು ಮನೆಗಳಿಗೆ ನುಗ್ಗುತ್ತಿರುವುದರಿಂದ ಜನರು ಗಾಬರಿಗೊಂಡಿದ್ದು, ಸಂಬಂಧಿಸಿದ ಇಲಾಖೆಯವರು ಸಾರ್ವಜನಿಕರ ಸುರಕ್ಷತೆಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮನೆಗೆ ನುಗ್ಗಿದ ಉಡಾ: ನಿವಾಸಿಗಳಿಗೆ ಆತಂಕ
