ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ಹರ ಘರ ತಿರಂಗಾ ಯಾತ್ರೆ

ಸಪ್ತ ಸಾಗರ ವಾರ್ತೆ, ವಿಜಯಪುರ, ಆ. 10:
ಸ್ವಾತಂತ್ರ್ಯೋತ್ಸವದ ಪೂರ್ವಭಾವಿಯಾಗಿ ಹರ ಘರ ತಿರಂಗಾ ಯಾತ್ರೆ ಸಂಸದ ರಮೇಶ ಜಿಗಜಿಣಗಿ ನೇತೃತ್ವದಲ್ಲಿ ವಿಜಯಪುರ ಜಿಲ್ಲೆ ಬಿಜೆಪಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ರಾಷ್ಟ್ರಭಕ್ತಿಯನ್ನು ಬಿಂಬಿಸುವ ಕಾರ್ಯಕ್ರಮವಾಗಿ ಬೈಕ್ ರ‍್ಯಾಲಿ ನಡೆಯಿತು. ಬೈಕ್ ಗೆ ತ್ರಿವರ್ಣ ಧ್ವಜ ಇರಿಸಿ ರ‍್ಯಾಲಿಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
ಬೋಲೊ ಭಾರತ ಮಾ ಕೀ ಜೈ, ವಂದೇ ಮಾತರಂ ಘೋಷಣೆ ಹಾಕುತ್ತಾ ಬೈಕ್ ರ‍್ಯಾಲಿ ಸಾಗಿತು.
ವಿಜಯಪುರ ನಗರದ ಸೆಟಲೈಟ್ ಬಸ್‌ ಸ್ಟ್ಯಾಂಡ್ (ಗೋದಾವರಿ ಹೊಟೆಲ್) ನಿಂದ ಶಿವಾಜಿ ಸರ್ಕಲ್, ಮಲೀಕ ಇ ಮೈದಾನ ತೋಪು, ಉಪಲಿ ಬುರ್ಜ, ಅಣ್ಣಾ ಇಡ್ಲಿ, ಗಾಂಧಿ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತವನ್ನು ಸುತ್ತುವರಿದು ಗಾಂಧಿ ವೃತ್ತದಿಂದ ಶಿವಾಜಿ ಸರ್ಕಲ್ ನಲ್ಲಿ ಸಮಾಪ್ತಗೊಂಡಿತು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ಮಹೀಂದ್ರಕುಮಾರ ನಾಯಕ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.
ಯಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

Share