ಸೌಲ️ಭ್ಯ ಬಳಸಿಕೊಂಡು ಸದೃಡರಾಗಿ: ಮದನ ಲೋಣಿ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 31: ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಇರುವ ರೈತ ಉತ್ಪಾದಕ ಕಂಪನಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಂವಾದ ಸಭೆಯನ್ನು ಕರೆಯಲಾಗಿತ್ತು. ಈ ಸಂವಾದ ಸಭೆಯನ್ನು ಕರ್ನಾಟಕ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಉಪಾಧ್ಯಕ್ಷ ಮದನ ಎಮ್. ಲೋಣಿ ಮಾತನಾಡಿ, ಕರ್ನಾಟಕ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ, ಕೃಷಿ ಇಲಾಖೆ ಕರ್ನಾಟಕ ಸರ್ಕಾರ ಅವರು ಸರ್ಕಾರದಲ್ಲಿ ಇರುವ ವಿವಿಧ ಯೋಜನೆಗಳನ್ನು ಬಳಸಿಕೊಂಡು ಸದೃಡರಾಗಲು ಕರೆ ನೀಡಿದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಎಸ್. ಎಸ್. ಪಾಟೀಲ️ ಮಾತನಾಡಿ, ಜಿಲ್ಲೆಯಲ್ಲಿ ಇರುವ ಎಲ್ಲಾ ರೈತ ಉತ್ಪಾದಕ ಕಂಪನಿಗಳು ಹಂತ ಹಂತವಾಗಿ ಕ್ರಿಯಾಶೀಲ️ರಾಗಬೇಕು ಎಂದು ತಿಳಿಸಿದರು.
ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಡಾ. ಬಾಬು ಸಜ್ಜನ ಅವರು, ಕಾರ್ಬನ್ ಕೆಡಿಟ್ ಮತ್ತು ಸಾವಯವ ಕೃಷಿ ಬಗ್ಗೆ ವಿಷಯ ಮಂಡನೆ ಮಾಡಿದರು. ರೈತ ಉತ್ಪಾದಕ ಕಂಪನಿಗಳ ಜೊತೆ ಅವರು ಸಂಸ್ಥೆ ವಿವಿಧ ಪರಿಸರ ಮತ್ತು ಪೂರಕ ವಿಷಯ ಕುರಿತು ಕಾರ್ಯ ನಿರ್ವಹಿಸಲು ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಕಾಸ ರಾಠೋಡ, ನಬಾರ್ಡ ಅಧಿಕಾರಿಗಳು ಮಾರ್ಗದರ್ಶನ ಮಾಡಿದರು. ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಲಾಯಿತು. ಪ್ರತಿ ೦೨ ತಿಂಗಳಿಗೊಮ್ಮೆ ಸಭೆ ಸೇರಿ ಪ್ರಗತಿ ಸಾಧಿಸಲು ತೀರ್ಮಾನಿಸಲಾಯಿತು. ಡಾ. ವಸ್ತ್ರದ, ಸಿದ್ದು ಪೂಜಾರಿ, ಮಹಾದೇವ ಅಂಬಲಿ, ಅಶೋಕ ಅಲ್ಲಾಪುರ, ಜಿಲ್ಲೆಯ ರೈತ ಉತ್ಪಾದಕ ಕಂಪನಿಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this