ಸಪ್ತಸಾಗರ ವಾರ್ತೆ, ವಿಜಯಪುರ, ಜು. 16:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಡಾ. ಪರಮ ಪೂಜ್ಯ ಡಿ. ವೀರೇಂದ್ರ ಹೆಗಡೆಯವರು ಮದ್ಯ ವ್ಯಸನಿಗಳ ಮುಕ್ತ ಶಿಬಿರಗಳನ್ನು ರಾಜ್ಯಾದ್ಯಂತ ಆಯೋಜನೆ ಮಾಡಿ ಸಾಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಬುಧವಾರ ಓಂ ಶ್ರೀ ಮಂಜುನಾಥಯ ನಮಃ ಶ್ರೀ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B C ಟ್ರಸ್ಟ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ ) ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ ) ಇವರ ಸಹಯೋಗದಲ್ಲಿ ಕಾಳಿಕಾನಗರದ ಮೌನೇಶ್ವರ ಸಭಾಭವನ ಆಶ್ರಮದಲ್ಲಿ ಆಯೋಜಿಸಿದ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯ ವ್ಯಸನ ಮುಕ್ತರಾಗಿ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಿವಾನಂದ ದೇಸಾಯಿ ಮಾತನಾಡಿದರು.
ಸಂತೋಷಕುಮಾರ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಜಿ. ಪಂ. ಮಾಜಿ ಸದಸ್ಯ ಸಂಜು ಐವಳ್ಳಿ, ಮಹಾನಗರ ಪಾಲಿಕೆ ಮಾಜಿ ಉಪ ಮಹಾಪೌರೆ ಲಕ್ಷ್ಮಿ ಕನ್ನೊಳ್ಳಿ, ಸಂಗಪ್ಪ ಸಂಗಳದ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪೂಜ್ಯ ವೀರೇಂದ್ರ ಹೆಗಡೆಯವರ ಕಾರ್ಯ ಸಮಾಜಕ್ಕೆ ಮಾದರಿ:ಜಿಗಜಿಣಗಿ
