ಗಾನಗಂಗೋತ್ರಿ ಗಾಯನ: ವಿದ್ಯಾಶ್ರೀ ನಡುಗಡ್ಡಿ ಆಯ್ಕೆ

ಸಪ್ತಸಾಗರ ವಾರ್ತೆ, ಇಂಡಿ, ಮೇ 15: ಬೆಂಗಳೂರಿನ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ 11 ನೇ ರಾಷ್ಟ್ರೀಯ ನೃತ್ಯ ಕಲಾ ಮೇಳ ಹಾಗೂ 75 ನೇ ರಾಜ್ಯ ಮಟ್ಟದ ಸಾಂಸ್ಕೃತಿಕ ಕಲಾ ಪ್ರತಿಭೋತ್ಸವ ಕಾರ್ಯಕ್ರಮವನ್ನು ಇದೇ ಮೇ 23,24 ರಂದು ಬೆಂಗಳೂರಿನ ಸಂಸ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕವನ ವಾಚನ, ನೃತ್ಯಾoಜಲಿ, ಸಮೂಹ ನೃತ್ಯ ಪ್ರದರ್ಶನ ಹಾಗೂ ಗಾನಗಂಗೋತ್ರಿ ಕರೋಕೆ ಗಾಯನ ಏರ್ಪಡಿಸಲಾಗಿದ್ದು,
ತಾಲೂಕಿನ ತಾಂಬಾ ನಿವಾಸಿ ಸಂಗೀತದಲ್ಲಿ ಸೀನಿಯರ್ ಸರ್ಟಿಫಿಕೇಟ್ ಕೋರ್ಸ್ ಪೂರ್ಣ ಮಾಡಿ, ಸದ್ಯ ಬಿಎಡ್ ಅಧ್ಯಯನ ಮಾಡುತ್ತಿರುವ ಕುಮಾರಿ ವಿದ್ಯಾಶ್ರೀ ನಡುಗಡ್ಡಿ ಅವರನ್ನು ಗಾನಗಂಗೋತ್ರಿ ಕರೋಕೆ ಗಾಯನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರಮೇಶ ಸುರ್ವೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ವಿದ್ಯಾಶ್ರೀ ಅವರು ಇಂಡಿ ತಾಲೂಕ ಕ್ಷೇತ್ರ ಸಮನ್ವಯಾಧಿಕಾರಿ ಎಸ್ ಆರ್ ನಡುಗಡ್ಡಿ ಅವರ ಸುಪುತ್ರಿಯಾಗಿದ್ದು, ಅವರ ಈ ಆಯ್ಕೆಗೆ ಕುಟುಂಬ ಹಾಗೂ ತಾಂಬಾ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

Share this