ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ವಿಜಯಪುರದ ಕ್ರೀಡಾಪಟುಗಳ ಸಾಧನೆ 11 ಪದಕಗಳ ಬೇಟೆ: 1 ಚಿನ್ನ, 6 ಬೆಳ್ಳಿ, 4 ಕಂಚು

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 21: ಹೈದರಾಬಾದ್‌ನ ಕಟೆಡನ್ ಕ್ರೀಡಾ ಸಂಕೀರ್ಣದಲ್ಲಿ ಸೆ. 20ರಂದು ನಡೆದ ರಾಷ್ಟ್ರೀಯ ಕರಾಟೆ ಕ್ರೀಡಾಕೂಟದಲ್ಲಿ ವಿಜಯಪುರದ ಕರಾಟೆ ಪಟುಗಳು ಒಟ್ಟು 11 ಪದಕಗಳನ್ನು ಗೆಲ್ಲುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕ್ರೀಡಾಕೂಟದಲ್ಲಿ ಬಾಲಕ, ಬಾಲಕಿಯರು ಹಾಗೂ ಪುರುಷರ ವಿವಿಧ ವಯೋಮಿತಿ ಮತ್ತು ಬೆಲ್ಟ್ ವಿಭಾಗಗಳಲ್ಲಿ ಸ್ಪರ್ಧಿಸಿದ ಕ್ರೀಡಾಪಟುಗಳು 1 ಚಿನ್ನ, 6 ಬೆಳ್ಳಿ ಹಾಗೂ 4 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪದಕ ವಿಜೇತರ ವಿವರ

ಚಿನ್ನದ ಪದಕ

  • ಪುರುಷರ ಬ್ಲ್ಯಾಕ್ ಬೆಲ್ಟ್ ಕಥಾ ವಿಭಾಗದಲ್ಲಿ 48 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಬಸವರಾಜ ಎನ್. ಬಾಗೇವಾಡಿ ಚಿನ್ನದ ಪದಕ ಪಡೆದಿದ್ದಾರೆ.

ಬೆಳ್ಳಿ ಪದಕ

  • ಬಾಲಕರ 8 ವರ್ಷದೊಳಗಿನ ಹಸಿರು ಬೆಲ್ಟ್ ಕಥಾ ವಿಭಾಗದಲ್ಲಿ ಅಬ್ದುಲ್ ವಾಹಿದ್ ಆರ್. ಜಮಾದಾರ್.
  • ಬಾಲಕರ 12 ವರ್ಷದೊಳಗಿನ ಕೇಸರಿ ಬೆಲ್ಟ್ ಕಥಾ ವಿಭಾಗದಲ್ಲಿ ತೇಜಸ್ ಆರ್. ಕೋಳಿ.
  • ಬಾಲಕಿಯರ 13 ವರ್ಷದೊಳಗಿನ ಕೇಸರಿ ಬೆಲ್ಟ್ ಕಥಾ ವಿಭಾಗದಲ್ಲಿ ಪ್ರತೀಕ್ಷಾ ಪಿ. ಪೋತದಾರ.
  • ಬಾಲಕಿಯರ 13 ವರ್ಷದೊಳಗಿನ ಕೇಸರಿ ಬೆಲ್ಟ್ ಕಥಾ ವಿಭಾಗದಲ್ಲಿ ಸಂಜೀವನಿ ಟಿ. ಶಿಂಧೆ.
  • ಬಾಲಕಿಯರ 16 ವರ್ಷದೊಳಗಿನ ಹಸಿರು ಬೆಲ್ಟ್ ಕಥಾ ವಿಭಾಗದಲ್ಲಿ ಕೃತಿಕಾ ಎನ್. ಹೊಟ್ಕರ.
  • ಬಾಲಕಿಯರ 17 ವರ್ಷದೊಳಗಿನ ಕೇಸರಿ ಬೆಲ್ಟ್ ಕಥಾ ವಿಭಾಗದಲ್ಲಿ ಶಿವಾನಿ ಎಸ್. ಘಾಟಗೆ.

ಕಂಚಿನ ಪದಕ

  • ಬಾಲಕಿಯರ 13 ವರ್ಷದೊಳಗಿನ ಹಸಿರು ಬೆಲ್ಟ್ ಕಥಾ ವಿಭಾಗದಲ್ಲಿ ಪೂರ್ಣಿಮಾ ಎನ್. ಕಾಂಬಳೆ.
  • ಬಾಲಕಿಯರ 14 ವರ್ಷದೊಳಗಿನ ಹಸಿರು ಬೆಲ್ಟ್ ಕಥಾ ವಿಭಾಗದಲ್ಲಿ ವೈಭವಿ ಎನ್. ಕಾಂಬಳೆ.
  • ಬಾಲಕಿಯರ 14 ವರ್ಷದೊಳಗಿನ ಕೇಸರಿ ಬೆಲ್ಟ್ ಕಥಾ ವಿಭಾಗದಲ್ಲಿ ಪಲ್ಲವಿ ಎಸ್. ಕುಂಬಾರ.
  • ಬಾಲಕಿಯರ 17 ವರ್ಷದೊಳಗಿನ ಕೇಸರಿ ಬೆಲ್ಟ್ ಕಥಾ ವಿಭಾಗದಲ್ಲಿ ಪೂನಂ ವಿ. ಜಾಧವ.

ಕ್ರೀಡಾಪಟುಗಳ ಈ ಸಾಧನೆಗೆ ಕ್ರೀಡಾಕೂಟದ ಆಯೋಜಕರು ಹಾಗೂ ನಿರ್ಣಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ತರಬೇತುದಾರರಾದ ಉತ್ನಾಳ ಗ್ರಾಮದ ಬಸವರಾಜ ಎನ್. ಬಾಗೇವಾಡಿ ಹಾಗೂ ಶಾಖಾ ತರಬೇತುದಾರ ರಿಯಾಜ್ ಎಂ. ಜಮಾದಾರ್ ಅವರು ಪದಕ ವಿಜೇತ ಮಕ್ಕಳೊಂದಿಗೆ ಹಾಜರಿದ್ದರು.
ರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ವಿಜಯಪುರಕ್ಕೆ ಕೀರ್ತಿ ತಂದ ಕ್ರೀಡಾಪಟುಗಳ ಸಾಧನೆಗೆ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Share this