ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 15:
ಫೆ. 18ರಂದು ಬೆಳಗ್ಗೆ 10-30ಕ್ಕೆ ಸೌಹಾರ್ದ ಸಹಕಾರಿಗಳ ಸಮಾವೇಶ ನಗರದ ಎಂಜಿನಿಯರಿಂಗ್ ಕಾಲೇಜ ಎದುರುಗಡೆ
ಆನಂದ ನಗರ ಬಡಾವಣೆಯ ಭಾವಸಾರ ಕ್ಷತ್ರಿಯ ಸಭಾ ಭವನದಲ್ಲಿ ನಡೆಯಲಿದೆ.
ಈ ಸಹಕಾರಿ ಸಮಾವೇಶದ ದಿವ್ಯ ಸಾನ್ನಿಧ್ಯವನ್ನು ಷಣ್ಮುಖಾರೂಡ ಮಠ ವಿಜಯಪುರ ಮತ್ತು ಹುಬ್ಬಳ್ಳಿಯ ಶಾಂತಾಶ್ರಮದ ಪರಮಪೂಜ್ಯರಾದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವಹಿಸಲಿದ್ದಾರೆ.
ಹಿರಿಯ ಸಹಕಾರಿಗಳು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ,
ಸಂಸದ ರಮೇಶ ಜಿಗಜಿಣಗಿ, ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಲಿದ್ದಾರೆ.
ಹಿರಿಯ ಮಾರ್ಗದರ್ಶಕರುಗಳಾದ ಅರವಿಂದ ಜಿ. ದೇಶಪಾಂಡೆ ಹಾಗೂ ರಮೇಶ ವೈದ್ಯಜಿ ಅವರು ಮಾರ್ಗದರ್ಶನ ಮಾಡಲಿದ್ದಾರೆ.
ಸೌಹಾರ್ದ ಫೆಡರಲ್ ಅಧ್ಯಕ್ಷ ನಂಜನಗೌಡ ಅವರು ಮತ್ತು ಸಹಕಾರ ಭಾರತಿ ಅಧ್ಯಕ್ಷ ಪ್ರಭುದೇವ ಮಾಗನೂರ ಅವರು ಉಪಸ್ಥಿತರಿರುವರು.
ವಿಜಯಪುರ ಜಿಲ್ಲೆಯ ಸಹಕಾರಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ , ವಿಧಾನ ಸಭಾ ಸದಸ್ಯ ಅರುಣ ಶಹಾಪುರ ಕೂಡ ಉಪಸ್ಥಿತರಿರುವರು.
ಸಭೆಯಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಕು. ಭಾಗ್ಯಶ್ರೀ ಕುಂಬಾರ, ಸಹಕಾರ ಭಾರತೀಯ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸಹಕಾರಿಗಳು ಭಾಗವಹಿಸಲಿದ್ದಾರೆ.
ಈ ಸಮಾವೇಶವನ್ನು ನೂತನವಾಗಿ ಸ್ಥಾಪನೆಯಾದ ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ
ಅಧ್ಯಕ್ಷ ಸಂಜಯ ಪಾಟೀಲ ( ಕನಮಡಿ ),
ಉಪಾಧ್ಯಕ್ಷ ಚಂದ್ರಶೇಖರ ಕವಟಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರಾದ ಅರುಣ ವಾರದ , ಸುರೇಶ ಬಿರಾದಾರ, ಅರುಣ ಮಠ , ಸಿದ್ದು ಮಲ್ಲಿಕಾರ್ಜುನಮಠ , ಬಾಲಚಂದ್ರ ಮುಂಜಾನೆ, ಆರ್.ಡಿ. ಕುಲಕರ್ಣಿ, ಚಂದ್ರಶೇಖರ ಪಾಟೀಲ, ರಾಜು ಹಂಚಾಟೆ, ಯಮನಪ್ಪ ಸಾತಿಹಾಳ, ಮಲ್ಕಪ್ಪ ರೊಟ್ಟಿ, ಮೌನೇಶ ಪತ್ತಾರ, ಸತೀಶ ಶಿಂತ್ರೆ , ವಿವೇಕಾನಂದ ಶಿರೋಳಕರ ಹಾಗೂ ಸಹಕಾರ ಭಾರತೀಯ ಪದಾಧಿಕಾರಿಗಳಾದ ಪರಶುರಾಮ ಚಿಂಚಲಿ ಮತ್ತು ದೀಪಕ ಶಿಂತ್ರೆ ಅವರು ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


