ಸಪ್ತಸಾಗರ ವಾರ್ತೆ,ವಿಜಯಪುರ, ಮಾ.21:
ಜಿಲ್ಲಾ ಚೆಸ್ ಅಸೋಸಿಯೇಷನ್ ಆಯೋಜಿಸಿದ ಜಿಲ್ಲಾಮಟ್ಟದ ಓಪನ್ ಮತ್ತು ಮಕ್ಕಳ ಚೆಸ್ ಟೂರ್ನಾಮೆಂಟ್ ಅನ್ನು ಮಾರ್ಚ್ 29 ಗುರುಕುಲ ಮಾದರಿ ಶಾಲೆ, ಮಿರಜ್ಕರ್ ಬಿಲ್ಡಿಂಗ್ ಅಥಣಿ ಸೊಲ್ಲಾಪುರ ರಿಂಗ್ ರೋಡ್ ಸುಕೂನ್ ಲೇಔಟ್ ಹತ್ತಿರ ವಿಜಯಪುರದಲ್ಲಿ ಆಯೋಜಿಸಲಾಗಿದೆ.
ವಿಜಯಪುರ ನಗರದ ಎ.ಆರ್. ಜೆ. (ARJ)ಇಂಟರ್ನ್ಯಾಷನಲ್ ಶಾಲೆಯವರು ಇದರ ಪ್ರಾಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ಟೂರ್ನಾಮೆಂಟ್ ನಲ್ಲಿ ಓಪನ್ ಅಂಡರ್ 15,13,11, ಮತ್ತು 9 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಸ್ಪರ್ಧೆಗಳು ಸ್ವಿಸ್ ಲೀಗ್ ಪದ್ಧತಿಯಲ್ಲಿ ನಡೆಯಲಾಗುತ್ತದೆ. ಪ್ರತಿಯೊಬ್ಬ ಆಟಗಾರರಿಗೂ 20 ನಿಮಿಷಗಳ ಜೊತೆಗೆ 5 ಸೆಕೆಂಡು ಹೆಚ್ಚುವರಿ ಸಮಯ ನೀಡಲಾಗುತ್ತದೆ. ಓಪನ್ ವಿಭಾಗದಲ್ಲಿ ಮೊದಲ ಮೂರು ಸ್ಥಾನಗಳಿಗೆ ಕ್ರಮವಾಗಿ 3000ರೂ. 2000ರೂ. ಮತ್ತು 1500ರೂ. ಜೊತೆಗೆ ಟ್ರೋಪಿಗಳನ್ನು ನೀಡಲಾಗುತ್ತದೆ. ನಾಲ್ಕನೆಯ ಮತ್ತು ಐದನೆಯ ಸ್ಥಾನಗಳಿಗೆ 1000ರೂ. ಮತ್ತು 500ರೂ. ಬಹುಮಾನಗಳಿವೆ. ಪ್ರತಿ ವಯೋಮಿತಿ ವಿಭಾಗದಲ್ಲಿ
ಮೊದಲು ಮೂರು ಸ್ಥಾನಗಳಿಗೆ ಬಹುಮಾನ ನೀಡಲಾಗುತ್ತದೆ. ಜೊತೆಗೆ ಪ್ರತಿ ವಿಭಾಗದ ಮೊದಲ ಎರಡು ಆಟಗಾರರು ಏಪ್ರಿಲ್,ಮೇ 2026 ರಲ್ಲಿ ನಡೆಯುವ ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹರಾಗುತ್ತಾರೆ. ಸ್ಪರ್ಧಾರ್ಥಿಗಳಿಗೆ ಉಚಿತ ಮಧ್ಯಾಹ್ನ ಊಟ ಮತ್ತು ಚೆಸ್ ಸೆಟ್ ಗಳ ಸೌಲಭ್ಯ ಒದಗಿಸಲಾಗುತ್ತದೆ. ಸ್ಪರ್ಧೆಯ ಮುಖ್ಯ ನಿರ್ಣಾಯಕರಾಗಿ ಪ್ರಮೋದರಾಜ್ ಮೋರೆ ಕಾರ್ಯ ನಿರ್ವಹಿಸಲಿದ್ದಾರೆ.
ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಹೆಸರು ನೋಂದಾಯಿಸಲು ಮಾರ್ಚ್ 25 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.7975819045 ಈ ನಂಬರಗೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.
ಮಾ. 29ರಂದು ವಿಜಯಪುರ ಡಿಸ್ಟಿಕ್ ಓಪನ್ ಅಂಡ್ ಚಿಲ್ಡ್ರನ್ ಚೆಸ್ ಕಾಂಪಿಟೇಶನ್


