ಬಿಎಲ್ ಡಿಇ ಎಸ್.ಎಸ್.ಎಂ ಔಷಧಿಯ ಮಹಾವಿದ್ಯಾಲಯದಲ್ಲಿ ದೃಷ್ಟಿಕೋನ ಕಂಕಣ ಕಾರ್ಯಕ್ರಮ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 16: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್.ಎಂ ಔಷಧಿಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದಲ್ಲಿ ನೂತನ ವಿದ್ಯಾರ್ಥಿಗಳಿಗಾಗಿ ದೃಷ್ಟಿಕೋನ ಕಾರ್ಯಕ್ರಮ ಕಂಕಣ- 2025 ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಗಾವಿಯ ಐ.ಸಿ.ಎಂ.ಆರ್ ಎನ್.ಐ.ಟಿ.ಎಂನ ಡಾ. ಬನಪ್ಪ ಉಂಗೆರ ಮಾತನಾಡಿ, ಫಾರ್ಮಾ ಪದವೀಧರರಿಗೆ ಭವಿಷ್ಯದಲ್ಲಿ ಹೊಸ ಔಷಧ ಅನ್ವೇಷಣೆ ಮತ್ತು ಸೂತ್ರೀಕರಣ ವಿನ್ಯಾಸ ಹಾಗೂ ಕ್ಲಿನಿಕಲ್ ಸಂಶೋಧನೆಯಲ್ಲಿ ವಿಪುಲ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿ. ಫಾರ್ಮ್ಸ್ ಸಂಯೋಜಕ ಡಾ. ಶ್ರೀಧರಕುಮಾರ ಬಿರಾದಾರ ಮತ್ತು ರವೀಂದ್ರಕುಮಾರ ರೇವಡಿಯುಗರ ಮಾತನಾಡಿ ಬಿ. ಫಾರ್ಮಾ ಮತ್ತು ಡಿ. ಫಾರ್ಮಾ ಕೋರ್ಸುಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನಶೆಟ್ಟಿ, ಡಾ. ವಿ. ಪಿ. ಪಾಟೀಲ, ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ. ಜಿ. ಹಳಕಟ್ಟಿ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕ ಸಂತೋಷ ಚಪ್ಪರ, ಕಾನೂನು ಮಹಾವಿದ್ಯಾಲದ ಶಿಕ್ಷಕಿ ಸನಾ ಕೌಸರ ಅವರು ಮಾತನಾಡಿದರು.
ಡಾ. ಸಂತೋಷ ಕರಜಗಿ ಸ್ವಾಗತಿಸಿದರು. ಅಶ್ವಿನಿ ಮತ್ತು ಡಾ. ಸುಧಾ ಪಾಟೀಲ ನಿರೂಪಿಸಿದರು. ಸಂತೋಷ ಅವಸ್ಥಿ ವಂದಿಸಿದರು.

Share