ವಿವೇಕ ವಿದ್ಯಾರ್ಥಿ ಪರೀಕ್ಷೆ : ರಾಜ್ಯಕ್ಕೆ ೧೦ನೇ ರ‍್ಯಾಂಕ್

ಸಪ್ತಸಾಗರ ವಾರ್ತೆ, ವಿಜಯಪುರ,ಜ. 15: ರಾಮಕೃಷ್ಣ-ವಿವೇಕಾನಂದ ಆಶ್ರಮ ತುಮಕೂರು ಇವರು ನಡೆಸಿದ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶಗಳ ಕುರಿತಾದ ರಾಜ್ಯ ಮಟ್ಟದ ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಎಕ್ಸಲಂಟ್ ಕನ್ನಡ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಕುಮಾರ ಜೀವನ ಕಾಮಗೊಂಡ, ಈ ವಿದ್ಯಾರ್ಥಿಯು ಉತ್ತಮ ಅಂಕಗಳಿಸಿ ರಾಜ್ಯಕ್ಕೆ ೧೦ನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ. ಜ. 11 ರಂದು ತುಮಕೂರಿನಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮದ ವತಿಯಿಂದ ನಡೆದ ಸಮಾರಂಭದಲ್ಲಿ ಸನ್ಮಾನಿತನಾಗಿರುತ್ತಾನೆ. ವಿದ್ಯಾರ್ಥಿಯ ಈ ಸಾಧನೆಗೆ ಎಕ್ಸಲಂಟ್ ಸಂಸ್ಥೆಯ ಚೇರಮನ್ ಬಸವರಾಜ ಕೌಲಗಿ, ನಿರ್ದೇಶಕ ಆರ್.ಎಸ್. ಕೌಲಗಿ, ಮಾರ್ಗದರ್ಶಕ ಜೆ. ಆರ್. ಗುಡ್ಡದ, ಮುಖ್ಯಗುರುಗಳಾದ ಎಂ. ಐ. ಬಿರಾದಾರ, ಮತ್ತು ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Share this