ಸಪ್ತಸಾಗರ ವಾರ್ತೆ, ವಿಜಯಪುರ, ಜ. 8: ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್, ಕರ್ನಾಟಕ ಇವರು ಇತ್ತೀಚೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಸ್ಪರ್ಧಾತ್ಮಕ “ವಿವೇಕ ವಿದ್ಯಾರ್ಥಿ” ಲಿಖಿತ ಪರೀಕ್ಷೆಯಲ್ಲಿ ನಗರದ ಹೊರವಲಯದಲ್ಲಿರುವ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಶ್ರೇಯಾ ಅಸ್ಕಿ ಪ್ರಥಮ ಸ್ಥಾನ, ಪೂರ್ವಿ ನಾಗರಳ್ಳಿ ದ್ವೀತಿಯ ಸ್ಥಾನ ಹಾಗೂ ಪ್ರತೀಕ್ಷಾ ರಾಠೋಡ ತೃತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅವರ ಈ ಸಾಧನೆಯನ್ನು ಕಂಡು ಎಕ್ಸಲಂಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಎನ್.ಕೆಲೂರ, ಪ್ರಾಂಶುಪಾಲರಾದ ತುಳಜಾರಾಮ ಸುಕ್ತೆ, ಶಿಕ್ಷಕರಾದ ವಿಠ್ಠಲ ದಳವಾಯಿ, ಪ್ರವೀಣ ಬಿರಾದಾರ ಹಾಗೂ ಎಲ್ಲ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.
ವಿವೇಕ ವಿದ್ಯಾರ್ಥಿ ಪರೀಕ್ಷೆ+ ಎಕ್ಸಲಂಟ್ ವಿದ್ಯಾರ್ಥಿಗಳ ಸಾಧನೆ


