ಸಪ್ತಸಾಗರ ವಾರ್ತೆ, ವಿಜಯಪುರ, ನ. 28: ಸ್ವಚ್ಚ, ಸುಂದರ, ಸದೃಢ ವಿಜಯಪುರಕ್ಕಾಗಿ ಡಿಸೆಂಬರ್ 7 ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಂದ ಮನವಿ ಬಂದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 4, 5 ಹಾಗೂ 6 ರಂದು ಮೂರು ದಿನಗಳ ಕಾಲ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ.
ಮೊದಲು ಬರುವ ಕೇವಲ 1000(ಒಂದು ಸಾವಿರ) ಜನರಿಗೆ ಅವಕಾಶ ಮಾತ್ರ ನೋಂದಣಿಗೆ ಅವಕಾಶ ಒದಗಿಸಲಾಗಿದೆ. ಕ್ರೀಡಾಪಟುಗಳು, ಸಾರ್ವಜನಿಕರು ಹಾಗೂ ಪರಿಸರಾಸಕ್ತರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಈಗಾಗಲೇ 21 ಕಿ. .ಮೀ ವಿಭಾಗದಲ್ಲಿ 538, 10 ಕಿ. ಮೀ. ವಿಭಾಗದಲ್ಲಿ, 264 ಹಾಗೂ 5 ಕಿ. ಮೀ ಓಟದಲ್ಲಿ 19,331 ಸೇರಿದಂತೆ ಒಟ್ಟು 20 ಸಾವಿರಕ್ಕೂ ಹೆಚ್ಚು ಓಟಗಾರರು ಆನಲೈನ್ ಮೂಲಕ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ನೋಂದಣಿ ಸಮಿತಿಯ ಡಾ. ರಾಜು ಯಲಗೊಂಡ, ವೀರೇಂದ್ರ ಗುಚ್ಚಟ್ಟಿ ಹಾಗೂ ವಿನಯ ಕಂಚ್ಯಾಣಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ವೃಕ್ಷಥಾನ್ ಹೆರಿಟೇಜ್ ರನ್ : ಸ್ಥಳದಲ್ಲಿಯೇ ನೊಂದಣಿಗೆ ಅವಕಾಶ


