ವಿಟಿಯು ಘಟಿಕೋತ್ಸವ: ಸಿಕ್ಯಾಬ್ ವಿದ್ಯಾರ್ಥಿಗೆ 5ನೇ ಸ್ಥಾನ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 29:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಬೆಳಗಾವಿ ನಡೆಸಿದ 26ನೇ ಘಟಿಕೋತ್ಸವದಲ್ಲಿ ವಿಜಯಪುರದ ಸಿಕ್ಯಾಬ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ‌್ಯಂಡ್ ಟೆಕ್ನಾಲಜಿಯ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮೊಹಮ್ಮದ್ ಶಕೀಲ್ ಉಜ್ಜಮಾನ್ ಅವರು ಬಿ.ಇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವಿಶ್ವವಿದ್ಯಾಲಯದ 5ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಇನ್ನೂ ವಿದ್ಯಾರ್ಥಿಗೆ ಆಡಳಿತ ಮಂಡಳಿಯಿಂದ ಸನ್ಮಾನಿಸಿ ಹರ್ಷ ವ್ಯಕ್ತಪಡಿಸಲಾಯಿತು.
ಮೊಹಮ್ಮದ್ ಶಕೀಲ್ ಉಜ್ಜಮಾನ್ ಅವರ ಈ ಸಾಧನೆಗೆ ಸಿಕ್ಯಾಬ್ ಅಸೋಸಿಯೇಷನ್‌ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಲಾವುದ್ದಿನ್ ಪುಣೇಕರ್, ಕಾರ್ಯದರ್ಶಿಗಳು ಹಾಗೂ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎ. ಎಸ್. ಪಾಟೀಲ, ನಿರ್ದೇಶಕರಾದ ಡಾ. ಜಿಯಾ ಅಬೇದಿನ್ ಪುಣೇಕರ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಸೈಯದ್ ಅಬ್ಬಾಸ್ ಅಲಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಅಲ್ತಾಫ್ ಭಾಗವಾನ್,ಡಾ.ಆಶಿಫ್ ದೊಡಮನಿ,ಡಾ. ಸೈಯದ್ ಸಮೀರ್,ಪ್ರೊ. ದಿಲೀಪ್ ಸುತ್ರಾವೆ,ಪ್ರೊ. ಸಚಿನ್ ಪಾಂಡೆ, ಪ್ರೊ.ಅಬ್ಬಾಸ್ ಭಾಗವಾನ್ ಹಾಗೂ ಸಹಾಯಕ ಸಿಬ್ಬಂದಿಗಳಾದ ಅಬ್ದುಲ್ ಪಠಾಣ್, ಮಹೇಬುಬ್ ಎನ್. ಕೆ. ಕಾಶಿಮ್ ಜನೇದಿ, ಕುತುಬುದ್ದಿನ್ ಮತ್ತು ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಯ ಸಾಧನೆಯು ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಮ್ಮೆ ತಂದಿದ್ದು, ಮುಂದಿನ ದಿನಗಳಲ್ಲಿಯೂ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದೆ.

Share this