ಸಪ್ತಸಾಗರ ವಾರ್ತೆ,ವಿಜಯಪುರ, ಅ. 11: ಸಮುದಾಯಗಳನ್ನು ಪೀಡಿಸುವ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಬ್ರೆಜಿಲ್ ನ ಸಾ ಪೌಲೊ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಸಲಹೆಗಾರ ಪ್ರೊ. ಬೆನೆಡಿಟೊ ಎಚ್. ಮಚಾಡೊ ಹೇಳಿದ್ದಾರೆ.
ಗುರುವಾರ ತಮ್ಮ ಪತ್ನಿ ಮತ್ತು ತಮ್ಮದೇ ವಿವಿಯ ಔಷಧ ರಸಾಯನಶಾಸ್ತ್ರ ವಿಭಾಗದ ನಿಕಟಪೂರ್ವ ಪ್ರಾಧ್ಯಾಪಕಿ ಪ್ರೊ. ಲೂಸಿಯಾನ್ ಎಂ. ಬೆನಧ್ಯಾಕ್ ಅವರ ಜೊತೆ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನಗರದ ಬಿ.ಎಲ್.ಡಿ.ಇ ಸಂಸ್ಶೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಆ್ಯಂಡ್ ರಿಸರ್ಚ್ ಸೆಂಟರ್ ಗೆ ಮತ್ತೋಭೇಟಿ ನೀಡಿದ ಅವರು, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಜಗತ್ತಿನಲ್ಲಿ ಸಮುದಾಯಗಳನ್ನು ಪೀಡಿಸುವ ರೋಗಗಳನ್ನು ನಿಂಯತ್ರಿಸಲು ಸಾಮೂಹಿಕ ಪ್ರಯತ್ನ ನಡೆಯಬೇಕು. ಆರ್ಥಿಕ ವಿಷಯಗಳಿಂತ ಹೆಚ್ಚಿನದನ್ನು ಪ್ರತಿನಿಧಿಸುವ ಬ್ರಿಕ್ಸ್ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಬಿ.ಎಲ್.ಡಿ.ಇ ಫಾರ್ಮಸಿ ಕಾಲೇಜು ನ್ಯಾಕ್ ನಿಂದ ಎ++ ಮಾನ್ಯತೆ ಪಡೆದ ಕೀರ್ತಿಗೆ ಪಾತ್ರವಾಗಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಈ ಕಾಲೇಜು ಮತ್ತು ಡೀಮ್ಡ್ ವಿವಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರೊ. ಲೂಸಿಯಾನ್ ಎಂ. ಬೆನಧ್ಯಾಕ್ ಮಾತನಾಡಿ, ಔಷಧ ಕೇತ್ರದಲ್ಲಿ ಹೊಸ ತಲೆಮಾರಿನ ವಿದ್ಯಾರ್ಥಿಗಳಿಗೆ ಆಧುನಿಕತೆಗೆ ತಕ್ಕಂತೆ ಬೋಧನೆ ಮತ್ತು ತರಬೇತಿ ಹಾಗೂ ಸಂಶೋಧನೆಗೆ ಒತ್ತು ನೀಡಬೇಕು. ಆರೋಗ್ಯಕರ ಮತ್ತು ಸಂತೋಷದ ಜಗತ್ತನ್ನು ಒಟ್ಟಿಗೆ ನಿರ್ಮಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಸಿ ಶೆಟ್ಟಿ, ರಿಸರ್ಚ್ ಆ್ಯಂಡ್ ಡೆವಲೆಪಮೆಂಟ್ ನಿರ್ದೇಶಕ ಡಾ. ಆರ್. ಬಿ. ಕೊಟ್ನಾಳ, ಡಾ. ವಿರೂಪನಗೌಡ, ಡಾ. ನಂಜಪ್ಪಯ್ಯ, ಡಾ. ಕೃಷ್ಣ ದೇಶಪಾಂಡೆ, ಡಾ. ಸೋಮಶೇಖರ ಮತ್ತಿತರರು ಇದ್ದರು.
ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು-ಮಚಾಡೋ


