ಸಪ್ತಸಾಗರ ವಾರ್ತೆ ವಿಜಯಪುರ, ಆ. 27:
ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಆ.22 ಮತ್ತು 23 ರಂದು ನಡೆದ ಅಸ್ಮಿತ ಖೇಲೋ ಇಂಡಿಯಾ ಮಹಿಳಾ ಯೋಗಾಸನ ಕ್ರೀಡಾಕೂಟದಲ್ಲಿ ಜಿಲ್ಲೆಯ ಬಾಲಿಕೆಯರು ಚಿನ್ನದ ಪದಕ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
18 ವರ್ಷದ ಒಳಗಿನ ಬಾಲಕಿಯರ ಆಟಿಸ್ಟಿಕ್ಕ ವಿಭಾದಲ್ಲಿ ಬಂಗಾರ ಪದಕ ಪಡೆದಿದ್ದು, ಕುಮಾರಿಯರಾದ ಶ್ರೀ ಲಕ್ಷ್ಮಿ ಮ್ಯಾಗೇರಿ, ಮರಿಯಮ್ಮ ಹರಿಜನ, ಪ್ರಿಯಾ ಚವ್ಹಾಣ, ಸುಮನ ಪೋಹಿಟೆ, ಹರ್ಷಿತಾ ಹರಿಜನ ತಂಡದೊಂದಿಗೆ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಎಂ. ನಿರಂಜನ ಮೂರ್ತಿ, ಬಸವರಾಜ ಬಾಗೇವಾಡಿ ಉತ್ನಾಳ, ಪ್ರೀತಿ ಕಾಳೆ, ಕುಮಾರಿ ಭಾಗ್ಯಶ್ರೀ ಚಲವಾದಿ, ಹಾಜರಿದ್ದರು.
ಅಸ್ಮಿತ ಖೇಲೋ ಇಂಡಿಯಾ ಯೋಗಸನ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಬಂಗಾರ ಪದಕ
