ಸಪ್ತಸಾಗರ ವಾರ್ತೆ,ವಿಜಯಪುರ, ಅ.7: ವಚನ ಸಾಹಿತ್ಯ ಸಂಸ್ಕೃತಿ ವೇದಿಕೆಯ ಆಶ್ರಯದಲ್ಲಿ ಕೈಲಾಸವಾಸಿ ಪ್ರಭಾಕರ ಶಂಕರ ಬಸವಪ್ರಭು (ಶಕ್ತಿ) ಸ್ಮರಣಾರ್ಥ 2026-27ನೇ ಸಾಲಿನ ವಿಜಯಪುರ ನಗರಮಟ್ಟದ ಮಹಿಳಾ ವಚನ ಕಂಠಪಾಠ ಸ್ಪರ್ಧೆಯನ್ನು ಅ.25ರಂದು ಬೆಳಿಗ್ಗೆ 10.30ಕ್ಕೆ ನಗರದ ಗೋಳಗುಮ್ಮಟದ ಎದುರಿನ ರಸ್ತೆಯಲ್ಲಿರುವ ಶ್ರೀ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ₹2,001 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ, ದ್ವಿತೀಯ ಬಹುಮಾನ ₹1,501 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಮತ್ತು ತೃತೀಯ ಬಹುಮಾನ ₹1,001 ನಗದು ನೀಡಲಾಗುವುದು. ಇಬ್ಬರು ಸಮಾಧಾನಕರರಿಗೆ ತಲಾ ₹251 ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಸ್ಪರ್ಧಾಳುಗಳು ಮುಂಚಿತವಾಗಿ ತಮ್ಮ ಹೆಸರನ್ನು ಕಾರ್ಯದರ್ಶಿಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಸ್ಪರ್ಧಾ ಸ್ಥಳದಲ್ಲಿ ನಿಗದಿತ ಸಮಯಕ್ಕೆ ಹಾಜರಾಗಬೇಕು. ತೀರ್ಪುಗಾರರು ಸೂಚಿಸುವ ವಚನಗಳನ್ನು ಮಾತ್ರ ಕಂಠಪಾಠದಿಂದ, ವಾಚನ ರೂಪದಲ್ಲಿ ಹೇಳಬೇಕು. ವಚನಗಳ ಕಂಠಪಾಠ, ಅಭಿವ್ಯಕ್ತಿ ಹಾಗೂ ಶಬ್ದೋಚ್ಚಾರಣೆ ಆಧರಿಸಿ ಅಂಕ ನೀಡಲಾಗುವುದು. ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರಲಿದೆ. ಸಮಾನ ಅಂಕ ಪಡೆದವರಿಗೆ ಸಮಾನ ಬಹುಮಾನ ನೀಡಲಾಗುವುದು. ಸಾಮೂಹಿಕ ವಚನ ವಾಚನಕ್ಕೆ ಅವಕಾಶ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಎನ್.ಆರ್. ಕುಲಕರ್ಣಿ (9632439697), ಶಂಕರ ಬಸವಪ್ರಭು (ಶಕ್ತಿ) (9902836243) ಹಾಗೂ ವಿ.ಎಸ್. ಖಾಡೆ (9448917271) ಅವರನ್ನು ಸಂಪರ್ಕಿಸಬಹುದು.
Editor
Rudrappa B Asangi
Editor
Managing Editor
Chetan Asangi
Managing Editor


