ಗ್ರಾಮಗಳ ಅಭಿವೃದ್ಧಿಗಾಗಿ ಹೆಮ್ಮೆಯಿಂದ ಕೆಲಸ ನಿರ್ವಹಿಸಿ: ಕಲ್ಲಪ್ಪ ನಂದರಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 21:
ಗ್ರಾಮಗಳ ಅಭಿವೃದ್ಧಿಗಾಗಿ ಹೆಮ್ಮೆಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಹೇಳಿದರು.
ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿ ಗ್ರಾಮ ಪಂಚಾಯತಿ ಅಡಿ ಹಮ್ಮಿಕೊಂಡ ರೋಜಗಾರ ದಿವಸ ಕಾರ್ಯಕ್ರಮದಲ್ಲಿ ಕೂಲಿಕಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸಿ ಅವರ ಜೀವನಕ್ಕೆ ಭದ್ರತೆ ಒದಗಿಸುವುದು. ದೀರ್ಘಕಾಲ ಬಾಳಿಕೆ ಬರುವ ಆಸ್ತಿಗಳನ್ನು ಸೃಜಿಸುವುದು. ಗ್ರಾಮೀಣ ಬಡಜನರ ಜೀವನೋಪಾಯದ ಮಟ್ಟ ಸುಧಾರಿಸುವುದು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಗುರಿಯಾಗಿದೆ ಎಂದು ತಿಳಿಸಿಧರು.
ನಿಮ್ಮ ಗ್ರಾಮಗಳ ಅಭಿವೃದ್ಧಿಯ ದೃಷ್ಠಿಯಿಂದ ಕೂಲಿಕಾರರು ಈ ಯೋಜನೆ ಅಡಿ ಕೆಲಸ ನಿರ್ವಹಿಸಬೇಕು. ಕೆಲಸ ನಿರ್ವಹಿಸಲು ಯಾವದೇ ಹಿಂಜರಿಕೆಯನ್ನು ಅನುಭವಿಸದೇ ಹೆಮ್ಮೆಯಿಂದ ಕೂಲಿ ಕೆಲಸ ಮಾಡಬೇಕು ಎಂದರು.
ನರೇಗಾ ಯೋಜನೆಯಲ್ಲಿ ವೀಲಚೇತನರಿಗೆ, ಹಿರಿಯ ನಾಗರಿಕರಿಗೆ, ಗರ್ಭಿಣಿ ಮಹಿಳೆಯರಿಗೆ ಕೆಲಸದಲ್ಲಿ ವಿಶೇಷ ವಿನಾಯಿತಿ ಮತ್ತು ಆದ್ಯತೆ ನೀಡಲಾಗುತ್ತಿದೆ. 25 ಜನ ಕೂಲಿಕಾರರು ಸೇರಿಕೊಂಡು ಒಂದೊಂದು ಕಾಯಕ ಸಂಘಗಳನ್ನು ರಚಿಸಿಕೊಂಡು ಸಂಘಟಕರಾಗುವದರ ಜೊತೆಗೆ ತಮ್ಮ ಹಕ್ಕನ್ನು ಪಡೆಯಬೇಕು ಎಂದರು.
ತಾಲೂಕು ಐಇಸಿ ಸಂಯೋಜಕ ಬಸವರಾಜ ಹುಣಸಗಿ ಅವರು ಮಾತನಾಡಿ, ನರೇಗಾ ಯೋಜನೆಯ ಕುರಿತು ಕೂಲಿಕಾರರ ಹಕ್ಕು ಮತ್ತು ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸುಭಾಸ ಮಿಲಿಟರಿ ಮಾತನಾಡಿ, ನಮ್ಮ ಗ್ರಾಮ ಪಂಚಾಯತಿಯು ಸದಾ ಕೂಲಿಕಾರರ ಹಿತದೃಷ್ಠಿಯನ್ನು ಬಯಸುತ್ತದೆ. ಹೀಗಾಗಿ ಕೆಲಸ ಬಯಸಿ ಬರುವ ಪ್ರತಿಯೊಬ್ಬರಿಗೂ ಕೆಲಸ ನೀಡಲಾಗುತ್ತದೆ. ಜಾಬ್ ಕಾರ್ಡ್ ಇರದೇ ಇರುವವರು ತಕ್ಷಣವೇ ಅರ್ಜಿ ಸಲ್ಲಿಸಿ ಕಾರ್ಡ್ ಮಾಡಿಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸುಭಾಸ ಮಿಲಿಟರಿ, ಪ್ರಾಂತ ರೈತ ಸಂಘದ ಅಧ್ಯಕ್ಷ ಅಣ್ಣಾರಾಯ ಇಳಗೇರ, ಸಂಪನ್ಮೂಲ ವ್ಯಕ್ತಿ ಸಾಬು ವಿಜಾಪುರ ಸೇರಿದಂತೆ ಕೂಲಿಕಾರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Share this