ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 6:
ನಗರದ ಚಿದಂಬರೇಶ್ವರ ದೇವಸ್ಥಾನ ಹತ್ತಿರ ವಿಶ್ವ ಪರಿಸರ ದಿನ ಅಂಗವಾಗಿ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿಯ ಸಂದೇಶ ಸಾರಲಾಯಿತು.
ಚಿದಂಬರ ಸೇವಾ ಸಮಿತಿಯ ಅಧ್ಯಕ್ಷ ಲಕ್ಷ್ಮಿಕಾಂತ ಕುಲಕರ್ಣಿ ಮಾತನಾಡಿ, ಪರಿಸರ ರಕ್ಷಿತ: ರಕ್ಷತ: ಎನ್ನುವಂತೆ ಪರಿಸರವನ್ನು ನಾವು ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ. ಪರಿಸರ ನಮಗೆ ಪ್ರಾಣವಾಯು, ಆಹಾರ ಎಲ್ಲವೂ ನೀಡಿದೆ, ಆದರೆ ನಾವು ಪ್ರತಿಯಾಗಿ ಪರಿಸರವನ್ನು ವಿನಾಶ ಮಾಡುತ್ತಿದ್ದೇವೆ. ಮಾಲಿನ್ಯಗೊಳಿಸುತ್ತಿದ್ದೇವೆ. ಹೀಗಾಗಿ ಪರಿಸರ ರಕ್ಷಣೆ ನಮ್ಮ ಜೀವನದ ಭಾಗವಾಗಬೇಕು ಎಂದರು.
ಯುವ ಧುರೀಣ ಪ್ರಕಾಶ ಅಕ್ಕಲಕೋಟ ಮಾತನಾಡಿ, ಪರಿಸರ ರಕ್ಷಣೆ ಕೇವಲ ಒಂದು ದಿನದ ಆಚರಣೆಯಾಗಬಾರದು. ಅನುದಿನವೂ ಪರಿಸರ ರಕ್ಷಣೆ ಬದ್ಧತೆಯಿಂದ ಮಾಡೊಣ ಎಂದರು.
ವೇದಮೂರ್ತಿ ಶಂಕರ ಭಟ್ ಅಗ್ನಿ ಹೋತ್ರಿ, ಮಹಾಲಕ್ಷ್ಮಿ ಬ್ಯಾಂಕ್ ನಿರ್ದೇಶಕ ವಿಜಯ ಜೋಶಿ, ಜೋಶಿ ಉದ್ಯಮ ಸಮೂಹದ ಮುಖ್ಯಸ್ಥ ಗೋವಿಂದ ಜೋಶಿ, ದತ್ತಾತ್ರೇಯ ಜೋಶಿ, ಕಾನಿಪ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಸುಧೀಂದ್ರ ಕುಲಕರ್ಣಿ, ಚಿದಂಬರ ಸೇವಾ ಸಮಿತಿಯ ಕಾರ್ಯದರ್ಶಿ ವೆಂಕಟೇಶ ಜೋಶಿ ನಂದವಾಡಗಿ, ದತ್ತಾತ್ರೇಯ ಜೋಶಿ, ಪ್ರಶಾಂತರಾವ್, ವೆಂಕಟೇಶ ಗುಡಿ, ಗೋವಿಂದ ದೇಶಪಾಂಡೆ, ಶ್ರೀನಿಧಿ ಜೋಶಿ, ಸದಾಶಿವ ಬಾವಿಕಟ್ಟಿ, ವೆಂಕಟೇಶ ಜೋಶಿ ಪಾಲ್ಗೊಂಡಿದ್ದರು.
ವಿಶ್ವ ಪರಿಸರ ದಿನಾಚರಣೆ


