ಗುಮ್ಮಟ ನಗರಿಗೆ ಬಂದ ವಿಶ್ವ ದಾಖಲೆ ಬರೆದ ಅತೀ ಚಿಕ್ಕ ಗಾತ್ರದ ಕುಬ್ಜ ಮಹಿಳೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 10 :
ಕೇವಲ 62.8 ಸೆಂಟಿಮೀಟರ್ ಉದ್ದವಿರುವ ಜಗತ್ತಿನ ಅತ್ಯಂತ ಕುಬ್ಜ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿರುವ ಜ್ಯೋತಿ ಆಮಗೆ ವಿಜಯಪುರಕ್ಕೆ ಭೇಟಿ ನೀಡಿದ್ದಾರೆ.
2011ರಲ್ಲಿ ಗಿನ್ನಿಸ್ ಸಂಸ್ಥೆ ಈ ವಿಶ್ವ ದಾಖಲೆಯನ್ನು ದಾಖಲಿಸಿ ಪ್ರಕಟಿಸಿತ್ತು. ಅವರು ಮಹಾರಾಷ್ಟ್ರದ
ನಾಗ್ಪುರದಲ್ಲಿ ಜನಿಸಿದರು ಮತ್ತು ಅವರು ನಟಿಯಾಗಿಯೂ ಕೆಲಸ ಮಾಡುತ್ತಿದ್ದು,
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಪೊಲೀಸರಿಗೆ ಸಾಥ್ ನೀಡಿ ಮತ್ತು ಜನರಿಗೆ
ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಈ ಎಲ್ಲ ಅಪೂರ್ವ ಸಾಧನೆ ಮಾಡಿರುವ ಅವರು ವಿಜಯಪುರಕ್ಕೆ ಪ್ರಪ್ರಥಮ ಭೇಟಿ
ನೀಡಿದರು.
ಈ ವೇಳೆ ವಿಜಯಪುರದ ಐತಿಹಾಸಿಕ ಗೋಳಗುಮ್ಮಟ, ಇಬ್ರಾಹಿಂ ರೋಜಾ
ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳನ್ನು ಭೇಟಿ ನೀಡಿ ಸ್ಮಾರಕಗಳ ವೈಭವ ಕಂಡು ಆನಂದಿಸಿದರು.

Share this