ಕಾದಂಬರಿಕಾರ ಎಸ್ ಎಲ್ ಬೈರಪ್ಪನವರ ಅಗಲಿಕೆಗೆ ಸಾಹಿತಿ, ಪ್ರೊ ಎ ಎಚ್ ಕೊಳಮಲಿ ಸಂತಾಪ.

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 25:
ಕಾದಂಬರಿಕಾರ ಎಸ್.ಎಲ್. ಬೈರಪ್ಪನವರ ಅಗಲಿಕೆಗೆ ಸಾಹಿತಿ, ಪ್ರೊ. ಎ.ಎಚ್. ಕೊಳಮಲಿ ಸಂತಾಪ ಸೂಚಿಸಿದ್ದಾರೆ.
ಕನ್ನಡ ಸಾರಸತ್ವ ಲೋಕದ ಬಹು ದೊಡ್ಡ ಶಕ್ತಿ. ಡಾ. ಎಸ್.ಎಲ್. ಭೈರಪ್ಪ ಅವರ ದಾಟು, ಪರ್ವ ಕಾದಂಬರಿ ಸೇರಿದಂತೆ ಕನ್ನಡ ಸಾಹಿತ್ಯ ಲೋಕಕ್ಕೆ ಹಲವಾರು ಗಟ್ಟಿತನದ ಕಾದಂಬರಿಯನ್ನು ರಚಿಸಿದ ಕಾದಂಬರಿಯ ಅಗ್ರಮಾನ್ಯ ಲೇಖಕನೆಂದು ಹೆಸರುವಾಸಿಯಾದ ಎಸ್.ಎಲ್. ಭೈರಪ್ಪನವರನ್ನು ಕಳೆದುಕೊಂಡು ಕರುನಾಡು ಅಷ್ಟೇಯಲ್ಲ. ಇಡೀ ಭಾರತ ದೇಶವೇ ಕಂಬನಿಯಲ್ಲಿ ಮಿಂದುಹೋಗಿದೆ ಎಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಶಕ್ತಿ ಭರಿತವಾದ ಸಾಹಿತ್ಯವನ್ನು ರಚಿಸುವುದರ ಮೂಲಕ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಮೇರು ವ್ಯಕ್ತಿತ್ವ ಎಸ್.ಎಲ್. ಭೈರಪ್ಪನವರದು. ಪದ್ಮಶ್ರೀ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪ್ರಶಸ್ತಿಯನ್ನು ಪಡೆದುಕೊಳ್ಳುವುದರ ಮೂಲಕ ಕನ್ನಡದ ಶಕ್ತಿಯನ್ನು ಜಗತ್ತಿಗೆ ತೋರ್ಪಡಿಸಿದವರು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕ ಬಡವಾಗಿದೆ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ ಭೈರಪ್ಪನವರನ್ನು ಕನ್ನಡಿಗರು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೊಳಮಲಿ ಅವರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

Share this